ಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರ
ಧಾರ್ಮಿಕ ಜ್ಯೋತಿಷ್ಯದ ಪ್ರಕಾರ ಇಂದು (ಅಕ್ಟೋಬರ್ 10) ಮೇಷ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 13ರಂದು ಶುಕ್ರ ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾನೆ.
ಗುರು ಶುಕ್ರರು ಮೇಷ ಮತ್ತು ವೃಶ್ಚಿಕ ರಾಶಿಯ 7ನೇ ಮನೆಗೆ ಪದಾರ್ಪಣೆ ಮಾಡುವುದರಿಂದ ಎರಡೂ ಗ್ರಹಗಳ ಸ್ಥಾನದಿಂದಾಗಿ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದ ನವರಾತ್ರಿ ಬಳಿಕ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
ಈ ರಾಶಿಯ ಉದ್ಯೋಗಸ್ಥರಿಗೆ ಪ್ರಮೋಷನ್, ಸಂಬಳ ಹೆಚ್ಚಾಗುವ ಸಾಧ್ಯತೆ. ವ್ಯಾಪಾರಸ್ಥರಿಗೆ ಬಂಪರ್ ಆರ್ಡರ್ ಸಿಗುವ ಸಾಧ್ಯತೆ. ವಿದೇಶ ವ್ಯವಹಾರದಿಂದ ಹಠಾತ್ ಧನಾಗಮನ ಸಂಭವವಿದೆ.
ಸಂಸಪ್ತಕ ರಾಜಯೋಗವು ಈ ರಾಶಿಯ ಜನರಿಗೆ ದಿಢೀರ್ ಧನಲಾಭ, ಒಂದರ ಹಿಂದೆ ಒಂದರಂತೆ ಶುಭ ಸುದ್ದಿಗಳನ್ನು ನೀಡಲಿದೆ. ಕುಟುಂಬದಲ್ಲಿ ಇಷ್ಟು ದಿನ ಇದ್ದ ದುಃಖದ ಛಾಯೆ ಮಾಯವಾಗಿ ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿಬರಲಿದೆ.
ಸಂಸಪ್ತಕ ರಾಜಯೋಗವು ಈ ರಾಶಿಯ ವೃತ್ತಿಪರರಿಗೆ ಬಡ್ತಿ, ವ್ಯಾಪಾರಸ್ಥರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಹಣದ ಹರಿವಿನಿಂದ ಖಜಾನೆ ತುಂಬಿ, ಸಮಾಜದಲ್ಲಿ ನಿಮ್ಮ ಕೀರ್ತಿ ಗೌರವವೂ ಹೆಚ್ಚಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.