ಇನ್ನೊಂದು ವರ್ಷ ಯಶಸ್ಸಿನ ಹಾದಿಯಲ್ಲಿಯೇ ಮುಂದುವರಿಯುತ್ತಾರೆ ಈ ರಾಶಿಯವರು ! ಕೂಡಿ ಬರುವುದು ಧನಿಕರಾಗುವ ಯೋಗ
ಗುರುವನ್ನು ಆಧ್ಯಾತ್ಮಿಕತೆ, ಸಮೃದ್ಧಿ, ಸಂಸ್ಕೃತಿ, ಸಂಪತ್ತು ಮತ್ತು ಸಂತೋಷ ಮತ್ತು ಶಾಂತಿಯ ಅಂಶವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗುರುವು ತನ್ನ ಚಲನೆಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಈ ಗೋಚರಿಸುತ್ತದೆ. ಏಪ್ರಿಲ್ 27 ರಂದು ಗುರುವು ಮೇಷ ರಾಶಿಯಲ್ಲಿ ಉದಯಿಸಿದ್ದಾನೆ.
ಗುರುವಿನ ಉದಯ ಮೂರು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಈ ರಾಶಿಯವರು ಮುಂದಿನ ಒಂದು ವರ್ಷದವರೆಗೆ ರಾಜರಂತೆ ಬದುಕು ನಡೆಸುತ್ತಾರೆ. ಜೀವನದಲ್ಲಿ ಗುರುವಿನ ದಯೆ, ಆಶೀರ್ವಾದದಿಂದ ಒಂದು ವರ್ಷ ಯಾವುದೇ ಯೋಚನೆ ಇಲ್ಲದೆ ಸಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ ಗುರುವಿನ ಉದಯವು ಧನು ರಾಶಿಯವರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಗುರು ಗ್ರಹವು ಈ ರಾಶಿಯವರ ಐದನೇ ಮನೆಯಲ್ಲಿ ಉದಯಿಸಿದೆ. ಗುರುವಿನ ಅನುಗ್ರಹದಿಂದ ಸಂತೋಷ ಮತ್ತು ಸಮೃದ್ಧಿ ಜೀವನದಲ್ಲಿ ಮನೆ ಮಾಡುತ್ತದೆ. ಆಕಸ್ಮಿಕವಾಗಿ ಧನಲಾಭ ಉಂಟಾಗಬಹುದು. ಅಷ್ಟೇ ಅಲ್ಲ, ಈ ಸಮಯದಲ್ಲಿ ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳು ನಡೆಯಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಶುಭಕರವಾಗಿರಲಿದೆ. ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ಗುರುವು ಉದಯಿಸಿದ್ದಾನೆ. ಹಾಗಾಗಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಈ ಸಮಯದಲ್ಲಿ ಆರ್ಥಿಕ ಲಾಭವೂ ಇರುತ್ತದೆ. ಈ ಅವಧಿಯು ವಿದ್ಯಾರ್ಥಿಗಳಿಗೂ ಅದ್ಭುತವಾಗಿರುತ್ತದೆ.
ಮುಂಬರುವ ವರ್ಷವು ಕರ್ಕಾಟಕ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಗುರುವು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಉದಯಿಸಲಿದ್ದಾನೆ. ಅಷ್ಟೇ ಅಲ್ಲ, ಮುಂದಿನ ಒಂದು ಗುರು ಇಲ್ಲೇ ಇರಲಿದ್ದಾನೆ. ಈ ಸಮಯದಲ್ಲಿ ಕೆಲಸ ಮತ್ತು ವ್ಯವಹಾರದಲ್ಲಿ ಅಮೋಘ ಯಶಸ್ಸು ಸಿಗುವುದು. ವ್ಯಾಪಾರವನ್ನು ವಿಸ್ತರಿಸುವ ಯೋಚನೆ ಇದ್ದರೆ ಇದು ಸುಸಂದರ್ಭ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)