ಮುಂದಿನ 111 ದಿನಗಳಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ವೃತ್ತಿಯಲ್ಲಿ ಬ್ರಹ್ಮಾಂಡ ಗೆಲುವು, ಸಿರಿತನ ಹುಡುಕಿ ಬರುತ್ತೆ
ದೇವಗುರು ಬೃಹಸ್ಪತಿ ಪ್ರತಿ ವರ್ಷ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೆಪ್ಟೆಂಬರ್ 4 ರಂದು ಮೇಷ ರಾಶಿಯಲ್ಲಿ ಗುರುವು ಹಿಮ್ಮುಖವಾಗಿ ಚಲಿಸಿದ್ದು, ಈ ಹಿಮ್ಮುಖ ಸ್ಥಿತಿ ಡಿಸೆಂಬರ್ 31ರವರೆಗೆ ಇರುತ್ತದೆ.
12 ವರ್ಷಗಳ ನಂತರ, ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆಯಿಂದ ಅನೇಕ ರಾಶಿಗಳು ಇದರ ಪ್ರಯೋಜನ ಪಡೆಯಲಿವೆ. ಅಂತಹ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ ರಾಶಿ: ಗುರು ವಕ್ರಿಯು ಮೇಷ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅದು ಅವರ ಪರವಾಗಿರುತ್ತದೆ. ಜೊತೆಗೆ ವಿಶೇಷ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಜೀವನದಲ್ಲಿ ಬಹಳಷ್ಟು ಸಂತೋಷ ಇರುತ್ತದೆ.
ಮಿಥುನ ರಾಶಿ: ಗುರುಗ್ರಹದ ಹಿಮ್ಮುಖ ಸ್ಥಿತಿಯು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಗುರುಗ್ರಹದ ಶುಭ ಪ್ರಭಾವದಿಂದಾಗಿ ಆದಾಯವೂ ಹೆಚ್ಚಾಗಬಹುದು. ಸಾಮಾಜಿಕ ಜೀವನದಲ್ಲಿ ನೀವು ತುಂಬಾ ಸಕ್ರಿಯರಾಗಿರುತ್ತೀರಿ. ವ್ಯಾಪಾರಗಳಲ್ಲಿ ಯಶಸ್ಸು ಕಾಣುವಿರಿ.
ಕರ್ಕಾಟಕ ರಾಶಿ: ಗುರು ವಕ್ರಿಯು ಕರ್ಕ ರಾಶಿಯವರಿಗೆ ಲಾಭ ನೀಡಲಿದೆ. ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಬಲವಾಗುತ್ತದೆ. ದುಡಿಯುವ ಜನರು ಇದರ ಶುಭ ಪರಿಣಾಮದಿಂದ ಹೊಸ ಉದ್ಯೋಗವನ್ನು ಪಡೆಯಬಹುದು.
ಕುಂಭ ರಾಶಿ: ಗುರು ಗ್ರಹದ ಹಿಮ್ಮುಖ ಚಲನೆಯು ಕುಂಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ. ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮಾಡುವ ಯಾವುದೇ ಕೆಲಸವಾದರೂ, ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢೀಕರಿಸುವುದಿಲ್ಲ.)