ಈ ರಾಶಿಯವರ ಜೀವನದಲ್ಲಿ ಆರಂಭವಾಗಿದೆ ಗುರು ದೆಸೆ !ಮುಟ್ಟಿದ್ದೆಲ್ಲಾ ಚಿನ್ನವಾಗುವುದರಲ್ಲಿ ಸಂದೇಹವೇ ಇಲ್ಲ !
ಈ ವರ್ಷ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರಿದ್ದಾನೆ ಗುರು. ಗುರು ದೆಸೆಯಿಂದ ಇವರ ಜೀವನದಲ್ಲಿ ಇಲ್ಲಿಯವರೆಗೆ ಎದುರಾಗಿದ್ದ ಕಷ್ಟಗಳಿಗೆ, ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.
ಮೇಷ ರಾಶಿ :ಮೇಷ ರಾಶಿಯವರೂ ಯಾವ ಕೆಲಸ ಮಾಡಿದರೂ ಅದರಲ್ಲಿ ಜಯ ಗಳಿಸುತ್ತಾರೆ. ಯಾವ ನಿರ್ಧಾರ ತೆಗೆದುಕೊಂಡರೂ ಅದು ಅವರನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗುತ್ತದೆ. ಯಾರ ಜೀವನದಲ್ಲಿ ವೈವಾಹಿಕ ಸಮಸ್ಯೆಗಳು ಕಾಣಿಸಿಕೊಂಡಿತ್ತೋ ಅವರ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಯಾಗಲಿದೆ.
ಕಟಕ ರಾಶಿ : ಕರ್ಕ ರಾಶಿಯವರ ಜೀವನದಲ್ಲಿ ಸಂತಸದಹೊನಲು ಹರಿಯುವುದು.ಉದ್ಯೋಗ ಬದಲಾಯಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಇದು ಸಕಾಲ. ನಿಮ್ಮ ಮನಸ್ಸಿನ ಆಸೆಯ ಪ್ರಕಾರವೇ ಉದ್ಯೋಗ ಸಿಗಲಿದೆ.ನಿಮ್ಮ ಆದಾಯ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ :ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.ಸಂತಾನ ಭಾಗ್ಯ ಒದಗಿ ಬರುವುದು.ಕುಟುಂಬ ಸದಸ್ಯರ ನಡುವೆ ಸೌಹಾರ್ದ ಸಂಬಂಧ ಹೆಚ್ಚಾಗುವುದು.ವಿದೇಶಕ್ಕೆ ಹೋಗುವ ಅವಕಾಶಗಳು ನಿಮ್ಮ ಜೀವನದಲ್ಲಿ ಬರಬಹುದು.ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತದೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.