ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಯವರ ಸುಖ ಶಾಂತಿ ಕಸಿದುಕೊಳ್ಳಲಿದ್ದಾನೆ ಗುರು
ಕುಂಭ ರಾಶಿ :ಬೃಹಸ್ಪತಿ ಈ ರಾಶಿಯ ಎರಡನೇ ಮನೆಯಲ್ಲಿ ಸಂಕ್ರಮಿಸಲಿದ್ದಾನೆ. ಮೀನರಾಶಿಯಲ್ಲಿ ಗುರುವಿನ ನೇರ ಚಲನೆ ಆರಂಭವಾದ ತಕ್ಷಣ, ಕುಂಭ ರಾಶಿಯವರ ಜೀವನದಲ್ಲಿ ಮಿಶ್ರ ಫಲ ನೀಡಲು ಆರಂಭಿಸುತ್ತಾನೆ. ನಿಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ರೀತಿಯಲ್ಲಿಯೂ ಇಳಿಮುಖವಾಗುವುದಿಲ್ಲ ಎನ್ನುವುದು ಸಮಾಧಾನಕರ ಸಂಗತಿ.
ಧನು ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನು ರಾಶಿಯ ನಾಲ್ಕನೇ ಮನೆಯಲ್ಲಿ ಗುರು ಸಾಗಲಿದ್ದಾನೆ. ಹೀಗಾದಾಗ ಈ ರಾಶಿಯವರು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇನ್ನು ಈ ಸಂದರ್ಭದಲ್ಲಿಯೂ ಆಗಾಗ ಧನಲಾಭವಾಗಬಹುದು. ಈ ಸಮಯದಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗುವ ಸಂಭವವಿದೆ. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಜಾಗರೂಕರಾಗಿರಿ.
ತುಲಾ ರಾಶಿ :ತುಲಾ ರಾಶಿಯವರ ಜಾತಕದಲ್ಲಿ ಗುರುವು ಆರನೇ ಮನೆಯಲ್ಲಿ ಸಾಗಲಿದ್ದಾನೆ. ಆರನೇ ಮನೆಯನ್ನು ಶತ್ರುಗಳ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಇರುತ್ತದೆ.
ಸಿಂಹ ರಾಶಿ : ಗುರು ಗ್ರಹವು ನೇರ ಚಲನೆ ಆರಂಭಿಸುವುದರೊಂದಿಗೆ ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಸಾಗುತ್ತಿದೆ. ಹೀಗಾಗಿ ಈ ರಾಶಿಯವರ ಜೀವನ ಅನೇಕ ಏರಿಳಿತಗಳಿಗೆ ಸಾಕ್ಷಿಯಾಗಬಹುದು. ಈ ಅವಧಿಯಲ್ಲಿ ಎಚ್ಚರಿಕೆ ಅಗತ್ಯ.