ಈ ಜಿಮ್ ನಲ್ಲಿ ಕಸರತ್ತು ಮಾಡುವವರು ಮನುಷ್ಯರಲ್ಲ ಕೋಣಗಳು..!

Wed, 29 Jun 2022-2:23 pm,

ಕರ್ನಾಲ್‌ನ ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಮನುಷ್ಯರಂತೆಯೇ ಪ್ರಾಣಿಗಳು ಕೂಡಾ ಪ್ರತಿದಿನ ಜಿಮ್ ಮಾಡುತ್ತವೆ.  

ವ್ಯಾಯಾಮ ಮಾಡುವುದರಿಂದ ಪ್ರಾಣಿಗಳ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿ. ಮಾತ್ರವಲ್ಲ ಪ್ರಾಣಿಗಳು ಜಿಮ್ ಮಾಡುವುದರಿಂದ ಆಗುವ ಲಾಭಗಳ ಬಗ್ಗೆಯೂ ಹಲವು ವಿಶೇಷ ಮಾಹಿತಿ ನೀಡಿದ್ದಾರೆ.  

ಕೇಂದ್ರದ ಉಸ್ತುವಾರಿ ಡಾ.ಪವನ್ ಸಿಂಗ್ ಮಾತನಾಡಿ, ಸಂಶೋಧನಾ ಕೇಂದ್ರದಲ್ಲಿ 120 ಗೂಳಿಗಳಿವೆ. ಇವುಗಳಲ್ಲಿ 70 ಸೀಮನ್ ಕಲೆಕ್ಷನ್‌ನಲ್ಲಿ ಉಳಿದಿವೆ. ಇವುಗಳಲ್ಲಿ ಪ್ರತಿದಿನ 10 ಗೂಳಿಗಳ ವೀರ್ಯ ಸಂಗ್ರಹಣೆ ಮಾಡಲಾಗುತ್ತದೆ. ವೀರ್ಯ ಸಂಗ್ರಹಣೆಗೂ ಮೊದಲು, ಸುಮಾರು  15 ನಿಮಿಷಗಳ ವ್ಯಾಯಾಮವನ್ನು ಮಾಡಲಾಗುತ್ತದೆ.

ವ್ಯಾಯಾಮ ಮಾಡುವುದರಿಂದ, ಪ್ರಾಣಿಗಳ ದೇಹವು ಯಾವಾಗಲೂ ಸೂಕ್ತ ಆಕಾರದಲ್ಲಿ ಉಳಿಯುತ್ತದೆ ಮತ್ತು ಪ್ರಾಣಿ ಸಕ್ರಿಯವಾಗಿರುತ್ತದೆ. ಈ ಕಾರಣದಿಂದಾಗಿ, ಪ್ರಾಣಿಯು ವೀರ್ಯವನ್ನು ತ್ವರಿತವಾಗಿ ನೀಡುತ್ತದೆ ಮತ್ತು ಅದರ ಗುಣಮಟ್ಟವು ಉತ್ತಮವಾಗಿರುತ್ತದೆ. 

ವ್ಯಾಯಾಮದ ನಂತರ ಪ್ರಾಣಿ ವಿಶ್ರಾಂತಿ ಪಡೆಯುವುದು ತುಂಬಾ ಸುಲಭ. ಇಲ್ಲಿ ಪ್ರಾಣಿಗಳು ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡುತ್ತವೆ. 

ಮನುಷ್ಯನಿಗೆ ವ್ಯಾಯಾಮ ಮಾಡುವುದು ಅವಶ್ಯಕ ಎಂದು ನಿಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ ಪ್ರಾಣಿಗಳಿಗೂ ಕಸರತ್ತು ಅಗತ್ಯವಾಗಿದೆ. ಇದೇ ಕಾರಣಕ್ಕೆ ವ್ಯಾಯಾಮಕ್ಕೆ ಈ ಸಾಧನಗಳನ್ನು ಅಳವಡಿಸಲಾಗಿದೆ.

ವ್ಯಾಯಾಮವು ಪ್ರಾಣಿಗಳನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಒತ್ತಡವನ್ನು ಮುಕ್ತಗೊಳಿಸುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link