ಸ್ಮಾರ್ಟ್ ಫೋನ್ ನಲ್ಲಿ ಮಾಡುವ ಈ ಕೆಲಸಗಳು ಬ್ಯಾಂಕ್ ಖಾತೆಯಿಂದ ಹಣ ಮಾಯವಾಗಲು ಕಾರಣವಾಗಬಹುದು ..!
ಬ್ಯಾಂಕ್ ಖಾತೆ ಸುರಕ್ಷತೆಗೆ ಲಿಂಕ್ ಮಾಡಲಾದ ಎಟಿಎಂ ಕಾರ್ಡ್ ವಿವರಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಡಿ. ATM ಕಾರ್ಡ್ ವಿವರಗಳನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬೇಡಿ. ಎಟಿಎಂ ಕಾರ್ಡ್‌ನ ಫೋಟೋ ಕೂಡಾ ಸೇವ್ ಮಾಡಿಕೊಳ್ಳಬೇಡಿ.
ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರ ಹೆಸರು ಅಥವಾ ಐಡಿ ಮತ್ತು ಪಾಸ್‌ವರ್ಡ್ ಅಥವಾ MPIN ಸಂಖ್ಯೆಯಂತಹ ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಇಟ್ಟುಕೊಳ್ಳಬೇಡಿ. ಹ್ಯಾಕರ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಿದರೆ ಎಲ್ಲಾ ವಿವರಗಳು ಅವರಿಗೆ ಸಿಗುತ್ತವೆ.
ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಯಾವುದೇ ಕಾರಣಕ್ಕೂ ಸ್ಮಾರ್ಟ್‌ಫೋನ್‌ನಲ್ಲಿ ಇರಿಸಿಕೊಳ್ಳಬೇಡಿ. ಬ್ಯಾಂಕಿಂಗ್ ಮಾಹಿತಿಯನ್ನು ನಿಮಗೆ ಸಾಧ್ಯವಾದಷ್ಟು ಖಾಸಗಿಯಾಗಿ ಇಟ್ಟುಕೊಳ್ಳಬೇಕು.
ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ನೀವು ವಾಟ್ಸಾಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಸಹ ಬಳಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿರುವಾಗ ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರೊಂದಿಗೆ WhatsApp ಅಥವಾ Facebook Messengerನಲ್ಲಿಯೂ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಬೇಡಿ. ಹ್ಯಾಕರ್‌ಗಳು ಈ ಮಾಹಿತಿಯನ್ನು ಹ್ಯಾಕ್ ಮಾಡಬಹುದು.
ನೀವು ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಂಕ್‌ನ ಅಪ್ಲಿಕೇಶನ್ ಅನ್ನು ಇಟ್ಟುಕೊಂಡಿದ್ದರೆ, ಅದನ್ನು ಬಳಸಲು ಸಾರ್ವಜನಿಕ ವೈ-ಫೈ ಅಥವಾ ನೆಟ್‌ವರ್ಕ್ ಅನ್ನು ಬಳಸಬೇಡಿ. ಓಪನ್ ನೆಟ್‌ವರ್ಕ್ ಎಂದಿಗೂ ಸುರಕ್ಷಿತವಲ್ಲ. ಬ್ಯಾಂಕ್ ಖಾತೆ ವಿವರಗಳು ಹ್ಯಾಕ್ ಆಗಬಹುದು.