ಈ ತರಕಾರಿ ತಿಂದರೆ ಹತ್ತೇ ನಿಮಿಷ ಸಾಕು ಬಿಳಿಕೂದಲು ಕಪ್ಪಾಗಲು..! ವಯಸ್ಸು 60 ದಾಟಿದ್ರೂ ಮತ್ಯಾವತ್ತೂ ಕೂದಲು ಬಿಳಿಯಾಗೋದಿಲ್ಲ
ಆಧುನಿಕ ಕಾಲದಲ್ಲಿ ಕೂದಲು ಬಿಳಿಯಾಗುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳ ಕೂದಲು ಕೂಡ ಬಿಳಿಬಣ್ಣಕ್ಕೆ ತಿರುಗುತ್ತಿದೆ. ಇದರಿಂದಾಗಿ ಜನರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ. ಜನರು ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ, ಆದರೆ ಸರಿಯಾದ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.
ಈ ಸಮಸ್ಯೆಗೆ ಕೆಲವೊಂದು ನೈಸರ್ಗಿಕ ಪರಿಹಾರವನ್ನು ಮಾಡಬಹುದು. ಅದರಲ್ಲಿ ಒಂದು ಸೋರೆಕಾಯಿ. ಈ ತರಕಾರಿಯನ್ನು ಕೆಲವೊಂದು ವಿಧಾನದಲ್ಲಿ ಬಳಕೆ ಮಾಡುವ ಮೂಲಕ ಬಿಳಿ ಕೂದಲು ಸೇರಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
ಕೂದಲು ಬಿಳಿಬಣ್ಣಕ್ಕೆ ತಿರುಗಿದ್ದರೆ ಅಥವಾ ತಿರುಗುತ್ತಿದ್ದರೆ ಹೇರ್ ಡೈ ಬಳಸಬಾರದು. ಏಕೆಂದರೆ ಇದು ಕೂದಲನ್ನು ಕ್ಷಣ ಮಾತ್ರಕ್ಕೆ ಕಪ್ಪಾಗಿಸಿದರೂ, ನಂತರ ಕೂದಲು ನಿರ್ಜೀವ ಮತ್ತು ಒಣಗಿದಂತೆ ಮಾಡುತ್ತದೆ. ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಕೂದಲಿಗೆ ಪ್ರಯೋಜನಕಾರಿ ಮತ್ತು ಉತ್ತಮವಾಗಿರುತ್ತದೆ. ಸೋರೆಕಾಯಿ ಮತ್ತು ಅದರ ಸಿಪ್ಪೆಯು ಕೂದಲಿಗೆ ತುಂಬಾ ಉಪಯುಕ್ತ. ಇದನ್ನು ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದನ್ನು ತಿಳಿಯೋಣ.
ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ದೇಹವನ್ನು ನಿರ್ವಿಷಗೊಳಿಸುತ್ತದೆ. ಜೊತೆಗೆ ಇದು ಚರ್ಮ ಮತ್ತು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ವಾರದಲ್ಲಿ 3 ದಿನ ಸೋರೆಕಾಯಿ ಜ್ಯೂಸ್ ಸೇವಿಸಿದರೆ, ಕ್ರಮೇಣ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಷ್ಟೇ ಅಲ್ಲದೆ, ಇಳಿ ವಯಸ್ಸಲ್ಲೂ ಕಪ್ಪುಕಪ್ಪಾದ ಕೂದಲು ನಿಮ್ಮದಾಗಿರುತ್ತದೆ.
ಸೋರೆಕಾಯಿಯನ್ನು ಸಿಪ್ಪೆಯು ಪ್ರಯೋಜನಕಾರಿಯಾಗಿದೆ. ಸಿಪ್ಪೆಯನ್ನು ಪುಡಿಮಾಡಿ ಅದರ ರಸದಿಂದ ತಲೆಯನ್ನು ಮಸಾಜ್ ಮಾಡಬಹುದು. ಹೀಗೆ ಮಾಡಿದರೆ ಕೂದಲು ಸ್ಮೂಥ್ ಆಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತದೆ.
ಕೂದಲನ್ನು ಕಪ್ಪಾಗಿಸಲು ಸೋರೆಕಾಯಿ ಎಣ್ಣೆಯನ್ನು ಬಳಸಬಹುದು. ಸೋರೆಕಾಯಿಯ ಸಿಪ್ಪೆಯನ್ನು ಕತ್ತರಿಸಿ ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈ ಸಿಪ್ಪೆಗಳನ್ನು ಸೇರಿಸಿ ಕುದಿಸಿ. ಅದು ತಣ್ಣಗಾದ ನಂತರ, ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಪ್ರತಿ ರಾತ್ರಿ ತಲೆಗೆ ಮಸಾಜ್ ಮಾಡಿ. ಬೆಳಿಗ್ಗೆ ಎದ್ದು ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕೂದಲಿಗೆ ಸರ್ವ ಸಮಸ್ಯೆಯೂ ದೂರವಾಗಿರುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.