Hair Care: ನಿಮ್ಮ ಕೂದಲಿನ ಮೇಲೆ ಮಾಂತ್ರಿಕ ಪರಿಣಾಮ ಬೀರುವ ಉಪಾಯಗಳಿವು

Sat, 24 Oct 2020-12:00 pm,

ನವದೆಹಲಿ: ಕಪ್ಪು-ಅಲೆಅಲೆಯಾದ ಕೂದಲು ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಉತ್ಪನ್ನಗಳು ಮತ್ತು ಬದಲಾಗುತ್ತಿರುವ ಜೀವನಶೈಲಿ ಕೂದಲಿನ ಮೇಲೆ ಪರಿಣಾಮ ಬೀರಿದೆ. ಕೂದಲು ಉದುರುವುದು, ಒಣಗಿದ ಕೂದಲು ಮತ್ತು ತಲೆಹೊಟ್ಟು, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿದೆ. ಅವುಗಳನ್ನು ತಡೆಗಟ್ಟಲು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ನಮ್ಮ ಸುತ್ತಲಿನ ಕೆಲವು ಗಿಡಮೂಲಿಕೆಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತವೆ. ನಿಮ್ಮ ಕೂದಲಿಗೆ ಸಂಪೂರ್ಣ ಪೌಷ್ಠಿಕಾಂಶವನ್ನು ನೀಡುವ ಮೂಲಕ ಅವುಗಳನ್ನು ಕಪ್ಪು, ದಪ್ಪ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಬನ್ನಿ ಕೂದಲಿಗೆ ಪ್ರಯೋಜನಕಾರಿ ಆಗಿರುವ ಗಿಡಮೂಲಿಕೆಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ...

ಆಲಿವ್ ಎಣ್ಣೆ (Olive oil) ಆಲಿವ್ ಎಣ್ಣೆಯು ಅನೇಕ ಪ್ರಯೋಜನಕಾರಿ ಪದಾರ್ಥಗಳನ್ನು ಹೊಂದಿರುತ್ತದೆ, ಇದು ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಮತ್ತು ಕೂದಲು ದಟ್ಟವಾಗಲು ಸಹಾಯ ಮಾಡುತ್ತವೆ. ಆಲಿವ್ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಕಂಡುಬರುತ್ತದೆ, ಇದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕೂದಲನ್ನು ಉದ್ದವಾಗಿ, ದಪ್ಪವಾಗಿಸಲು ಮತ್ತು ಅವುಗಳ ನೈಸರ್ಗಿಕ ಹೊಳಪನ್ನು ಉಳಿಸಿಕೊಳ್ಳಲು, ಕ್ಯಾಸ್ಟರ್ ಆಯಿಲ್ನೊಂದಿಗೆ ಅಂದರೆ ಹರಳೆಣ್ಣೆಯಿಂದ ನಿಯಮಿತವಾಗಿ ತಲೆ ಮಸಾಜ್ ಮಾಡಬೇಕು. ಭಾರತದಲ್ಲಿ ಕಂಡುಬರುವ ಬರ್ಡಾಕ್ ಸಸ್ಯವನ್ನು ಕ್ಯಾಸ್ಟರ್ ಆಯಿಲ್ ನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ, ಕೂದಲಿನ ಕಳೆದುಹೋದ ಹೊಳಪನ್ನು ಹಿಂತಿರುಗಿಸಬಹುದು. ಇದು ಕೂದಲು ಉದುರುವುದನ್ನು ತಡೆಯಬಹುದು.

ಮೆಂತ್ಯವನ್ನು ಕೂದಲಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಇದು ಕೂದಲನ್ನು ಹೊಳೆಯುವಂತೆ ಮಾಡುವುದರ ಜೊತೆಗೆ ಮೃದುಗೊಳಿಸುತ್ತದೆ. ಮೆಂತ್ಯ ಬೀಜ ಮತ್ತು ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಇದರಿಂದ ಕೂದಲು ಉದ್ದ ಮತ್ತು ದಪ್ಪವಾಗಿರುತ್ತದೆ.  

ಕೂದಲು ಪೋಷಣೆಗೆ ಆಮ್ಲಾವನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕೂದಲಿನ ನೈಸರ್ಗಿಕ ಬಣ್ಣ ಮತ್ತು ಹೊಳಪನ್ನು ಕಾಪಾಡಿಕೊಳ್ಳಲು ಆಮ್ಲಾವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಉತ್ತಮ ಉತ್ಕರ್ಷಣ ನಿರೋಧಕವೂ ಆಗಿದೆ. ನೆಲ್ಲಿಕಾಯಿ ರಸವನ್ನು ಪ್ರತಿದಿನ ಕುಡಿಯುವುದರಿಂದ ಕೂದಲನ್ನು ಬಲಪಡಿಸುತ್ತದೆ ಮತ್ತು ದಪ್ಪ ಮತ್ತು ಹೊಳೆಯುವಂತೆ ಮಾಡುತ್ತದೆ.

ಭ್ರುಂಗರಾಜ್ ತೈಲ ಕೂದಲಿಗೆ ಪರಿಣಾಮಕಾರಿ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದರ ಎಣ್ಣೆಯಲ್ಲಿ ಹರಿತಾಕಿ ಮತ್ತು ಜಟಮಾನ್ಸಿ ಎಂಬ ಪದಾರ್ಥಗಳಿವೆ, ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಡಲು ಸಹಾಯ ಮಾಡುತ್ತದೆ. ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಉತ್ತಮ ಕೂದಲು ಬೆಳವಣಿಗೆಗೆ ಕೂಡ ಸಹಕಾರಿ ಎಂದು ಹೇಳಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link