Hair Care Tips: ನಿಮ್ಮ ಕೂದಲು ದಟ್ಟವಾಗಿ ಬೆಳೆಯಬೇಕಾದ್ರೆ ಹೀಗೆ ಮಾಡಿ
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯ ಪರಿಣಾಮ ಇಂದು ಅನೇಕ ಜನರು ಬೊಕ್ಕುತಲೆ, ಕೂದಲು ಉದುರುವ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜಗತ್ತಿನ ಬಹುತೇಕ ಜನರು ತಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಕೆಲವು ಜನರು ತಮ್ಮ ಕೂದಲಿನ ಆರೈಕೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಕೊಬ್ಬರಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡು ತಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ.
ಇಂದು ಕೆಲವರಿಗೆ ಕೂದಲು ಉದುರುತ್ತಿದೆ ಅನ್ನೋ ಚಿಂತೆಯಾದರೆ, ಇನ್ನು ಕೆಲವರಿಗೆ ನನಗೆ ಉದ್ದನೆಯ ಕೇಶರಾಶಿ ಇಲ್ಲವಲ್ಲ ಅನ್ನೋ ಕೊರಗು ಕಾಡುತ್ತದೆ. ನನ್ನ ಕೂದಲು ಸಹ ಸೊಂಪಾಗಿ, ದಟ್ಟವಾಗಿ ಬೆಳೆಯಬೇಕು. ತನ್ನ ಕೂದಲಿನ ಮೂಲಕವೇ ನಾನು ಮತ್ತಷ್ಟು ಚೆನ್ನಾಗಿ ಕಾಣಬೇಕು ಅನ್ನೋದು ಅನೇಕರ ಆಸೆಯಾಗಿರುತ್ತದೆ.
ಇಂದು ಅನೇಕರು ಡ್ಯಾಂಡ್ರಫ್, ಬಿಳಿ ಕೂದಲು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತಮ್ಮ ಕೂದಲ ಆರೋಗ್ಯಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡೆಕ್ಟ್ಗಳನ್ನು ಬಳಸಿ ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ಕೂದಲು ಸೊಂಪಾಗಿ ಮತ್ತು ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ಮನೆಮದ್ದುಗಳಿವೆ. ಇವುಗಳನ್ನು ಬಳಸಿದರೆ ಸಾಕು ನಿಮ್ಮ ಕೂದಲಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಬೆಟ್ಟದ ನೆಲ್ಲಿಕಾಯಿಯು ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿ ಹೇಳಿ ಮಾಡಿಸಿದ ಮನೆಮದ್ದು. ನಿಮ್ಮ ಕೂದಲು ಸೊಂಪಾಗಿ ಮತ್ತು ದಟ್ಟವಾಗಿ ಬೆಳೆಯಲು ನಿಯಮಿತವಾಗಿ ನೆಲ್ಲಿಕಾಯಿ ಬಳಸುವುದನ್ನು ರೂಢಿಸಿಕೊಳ್ಳಿರಿ. ಕೂದಲು ದಟ್ಟವಾಗಿ ಬೆಳೆಯಲು ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು.
ಕೂದಲು ಸೊಂಪಾಗಿ ಮತ್ತು ದಟ್ಟವಾಗಿ ಬೆಳೆಯಲು ಮೆಂತ್ಯೆ ಹಾಗೂ ದಾಸವಾಳದ ಹೂವು ಬಳಸಬೇಕು. ಇವುಗಳು ನಿಮ್ಮ ಕೂದಲಿಗೆ ಹೊಳಪು ನೀಡುವುದಲ್ಲದೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ. ಹೀಗೆ ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು.