Hair Care Tips: ಬಿಳಿಕೂದಲ ಸಮಸ್ಯೆಯಿಂದ ಮುಕ್ತಿ ಬೇಕಾದ್ರೆ ಈ ಜ್ಯೂಸ್‌ಗಳನ್ನು ಸೇವಿಸಿರಿ
ನೆಲ್ಲಿಕಾಯಿ ವಿಟಮಿನ್ ʼCʼ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಕೂದಲಿನ ಆರೋಗ್ಯ ಉತ್ತೇಜಿಸಲು, ಅಕಾಲಿಕ ಬಿಳಿ ಬಣ್ಣವನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಬಿಳಿ ಕೂದಲು ಆಗುವುದನ್ನು ತಡೆಯುವ ಜೊತೆಗೆ ಕೂದಲಿನ ಬುಡ ಗಟ್ಟಿಮಾಡಲು ಸಹಕಾರಿಯಾಗಿವೆ. ನಿಯಮಿತವಾಗಿ ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದರಿಂದ ನೀವು ಆರೋಗ್ಯಕರ ಕೂದಲನ್ನು ಹೊಂದಬಹುದು.
ಕಬ್ಬಿಣ ಮತ್ತು ವಿಟಮಿನ್ A, Cಯಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಕಾರಿ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕಬ್ಬಿಣಾಂಶ ಕೊರತೆಯು ಅಕಾಲಿಕ ಬಿಳಿ ಬಣ್ಣಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಕಬ್ಬಿಣಾಂಶವು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಹೀಗಾಗಿ ನೀವು ನಿಯಮಿತವಾಗಿ ಪಾಲಕ್ ಸೊಪ್ಪು ಸೇವಿಸಬೇಕು.
ಆಂಟಿ ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ವಿಶೇಷವಾಗಿ ವಿಟಮಿನ್ ʼCʼ ಹೊಂದಿದೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕೂದಲಿನ ಶಕ್ತಿ ಮತ್ತು ಕಪ್ಪು ಬಣ್ಣಕ್ಕೆ ಕಾಲಜನ್ ಅತ್ಯಗತ್ಯ. ಇದು ಬಿಳಿ ಕೂದಲು ಆಗುವುದನ್ನು ತಡೆಯುತ್ತದೆ. ಸದೃಢ ಕೂದಲಿಗೆ ನೀವು ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಸೇವಿಸಬೇಕು.
ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ವಿಟಮಿನ್ ʼAʼ ಆಗಿ ಪರಿವರ್ತನೆಗೊಳ್ಳುತ್ತದೆ. ವಿಟಮಿನ್ ʼAʼ ಚರ್ಮದಲ್ಲಿ ಎಣ್ಣೆ ಉತ್ಪಾದನೆಗೆ ಮುಖ್ಯವಾಗಿದೆ. ಇದು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಶುಷ್ಕತೆಯನ್ನು ತಡೆಯುತ್ತದೆ. ಇದು ಅಕಾಲಿಕ ಬಳಿ ಬಣ್ಣವನ್ನು ತಡೆಯಲು ಸಹಕಾರಿಯಾಗಿದೆ.
ನಿಂಬೆ ಹಣ್ಣು ವಿಟಮಿನ್ ʼCʼಯಿಂದ ಸಮೃದ್ಧವಾಗಿದೆ. ನಿಂಬೆ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ನಿಂಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಅದೇ ರೀತಿ ಕೂದಲ ಆರೋಗ್ಯಕ್ಕೂ ಇದು ತುಂಬಾ ಸಹಕಾರಿಯಾಗಿದೆ.