Hair Care Tips: ಮಳೆಗಾಲದಲ್ಲಿ ಕೂದಲುದುರುವಿಕೆ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ಟ್ರೈ ಮಾಡಿ ನೋಡಿ
1. ನಿತ್ಯ ಮೊಟ್ಟೆಯನ್ನು ಸೇವಿಸಿ - ಕೂದಲಿನ ಆರೋಗ್ಯಕ್ಕೆ ಮೊಟ್ಟೆ ಉತ್ತಮ ಎಂದು ಹೇಳಲಾಗುತ್ತದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಇದರಿಂದ ಕೂದಲಿನ ಬುಡಕ್ಕೆ ಪೋಷಣೆ ಸಿಗುತ್ತದೆ ಹಾಗೂ ಕೂದಲಿನ ಬೇರುಗಳು ಗಟ್ಟಿಗೊಳ್ಳುತ್ತವೆ. ಕೂದಲಿಗೆ ಬೇಕಾಗುವ Keratin ಪ್ರೋಟೀನ್ ಪ್ರಮಾಣ ಹೆಚ್ಚಿಸುವಲ್ಲಿ ಮೊಟ್ಟೆ ಸಹಕಾರಿಯಾಗಿದೆ. ಇದು ಕೂದಲಿನ ಬೆಳವಣಿಗೆಗೆ ಬೇಕಾಗುವ ಒಂದು ಮಹತ್ವದ ಪ್ರೋಟೀನ್ ಆಗಿದೆ. ಹೀಗಾಗಿ ನಿತ್ಯ ಬೆಳಗ್ಗೆ ತಿಂಡಿಯಲ್ಲಿ ಮೊಟ್ಟೆ ಸೇವಿಸುವುದು ಉತ್ತಮ ಎನ್ನಲಾಗುತ್ತದೆ.
2. ಅಕ್ರೋಟ್ ಹಾಗೂ ಬಾದಾಮ್ ಸೇವಿಸಿ - ವಾಲ್ನಟ್ಸ್ ಮತ್ತು ಬಾದಾಮಿ ಸೇವನೆ ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಈ ಕಾರಣದಿಂದಾಗಿ ಕೂದಲಿನ ತೇವಾಂಶ ಹಾಗೇ ಇರುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಲು, ಈ ಒಣ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಖಂಡಿತವಾಗಿ ಸೇರಿಸಿ.
3. ಯೋಗರ್ಟ್ ಹಾಗೂ ಹಾಲು - ಬೆಳಗಿನ ಉಪಹಾರದಲ್ಲಿ ಹಾಲು ಕುಡಿಯುವುದು ಅಥವಾಯೋಗರ್ಟ್ ತಿನ್ನುವುದು ದೇಹಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಕಳೆದುಹೋದ ತೇವಾಂಶವನ್ನು ಪುನಃಸ್ಥಾಪಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.