ಅಡುಗೆಗೆ ಮಾತ್ರವಲ್ಲ… ದಟ್ಟವಾದ, ಗಾಢ ಕಪ್ಪು, ಸಮೃದ್ಧ-ಉದ್ದವಾಗಿ ಕೂದಲು ಬೆಳೆಯಲು ಬಳಸಿ ಶುಂಠಿ ಹೇರ್ ಪ್ಯಾಕ್!
ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚರ್ಮ ಮತ್ತು ಕೂದಲಿನ ಪರಿಸ್ಥಿತಿಯೂ ಸಹ ಕ್ಷೀಣಿಸುತ್ತಾ ಬಂದಿದೆ
ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲು ನೈಸರ್ಗಿಕ ಪರಿಹಾರವೊಂದಿದೆ. ಅದುವೇ ಶುಂಠಿ. ಶುಂಠಿಯು ಶಕ್ತಿಯುತವಾದ ಘಟಕಾಂಶವಾಗಿ ಹೊರಹೊಮ್ಮಿದೆ. ಕೂದಲಿನ ಆರೈಕೆಯಲ್ಲಿ ಶುಂಠಿ ಬೆಸ್ಟ್ ಎಂದು ಹೇಳಲಾಗುತ್ತಿದೆ. ಶುಂಠಿ ನೆತ್ತಿ ಮತ್ತು ಕೂದಲಿನ ಕಿರುಚೀಲಗಳಿಗೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ,
ರಕ್ತ ಪರಿಚಲನೆಯನ್ನು ಉತ್ತೇಜಿಸುವುದರಿಂದ ಹಿಡಿದು ನೆತ್ತಿಯ ಪೋಷಣೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುವವರೆಗೆ, ಶುಂಠಿ ಅದ್ಭುತಗಳನ್ನು ಮಾಡುತ್ತದೆ.
ಭಾರತದಲ್ಲಿ, ಶುಂಠಿಯು ಹೆಚ್ಚಿನ ಮನೆಗಳಲ್ಲಿ ಸುಲಭವಾಗಿ ಕಂಡುಬರುವ ನೈಸರ್ಗಿಕವಾದ ಆಹಾರ ವಸ್ತು. ಹೊಟ್ಟೆಯ ಅಸ್ವಸ್ಥತೆಗೆ ಸಾಮಾನ್ಯ ಚಿಕಿತ್ಸೆಗಳಲ್ಲಿ ಶುಂಠಿ ಕೂಡ ಒಂದು. ಶುಂಠಿಯನ್ನು ಮೊಡವೆ, ಚರ್ಮದ ಸುಡುವಿಕೆ, ತಲೆಹೊಟ್ಟು, ಕೂದಲ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕಲು ಬಳಸಲಾಗುತ್ತದೆ.
ಒಣ ನೆತ್ತಿಯು ಪ್ರಪಂಚದಾದ್ಯಂತ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಶುಂಠಿಯಲ್ಲಿರುವ ನಂಜುನಿರೋಧಕ ಗುಣಲಕ್ಷಣಗಳು ನೆತ್ತಿಯ ಸೋಂಕುಗಳು ಮತ್ತು ತಲೆಹೊಟ್ಟು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೆತ್ತಿಯ ಮೇಲೆ ಶುಂಠಿಯನ್ನು ಪೇಸ್ಟನ್ನು ಹಚ್ಚಿದರೆ, ಆ ಪ್ರದೇಶದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಶುಂಠಿಯು ಹಲವಾರು ವಿಟಮಿನ್‌ಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿದೆ, ಇದು ಕೂದಲಿನ ಗುಣಮಟ್ಟವನ್ನು ಬಲಪಡಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ, ಹೀಗೆ ಮಾಡಿದರೆ, ಉದ್ದವಾದ, ಬಲವಾದ ಕೂದಲು ಬರುತ್ತದೆ.
ಶುಂಠಿಯಲ್ಲಿರುವ ಪ್ರಬಲವಾದ ಉತ್ಕರ್ಷಣ ನಿರೋಧಕಗಳು ಕೂದಲಿಗೆ ಪೋಷಣೆಯನ್ನು ಒದಗಿಸುವಲ್ಲಿ ಉಪಯುಕ್ತವಾಗಿದೆ, ಶುಂಠಿಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಕೂದಲ ಕಿರುಚೀಲಗಳನ್ನು ರಕ್ಷಿಸಿ, ಹಾನಿಯನ್ನು ಕಡಿಮೆ ಮಾಡುತ್ತದೆ,
ಶುಂಠಿ ಎಣ್ಣೆ ರೂಪದಲ್ಲಿ ಸಹ ಬರುತ್ತದೆ. ಇದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೇರುಗಳಿಗೆ ಪೋಷಣೆ ಸಿಗುತ್ತದೆ, ಜೊತೆಗೆ ಕಪ್ಪು ಕೂದಲು ನಿಮ್ಮದಾಗುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)