Hair Care Tips: ಮನೆಯಲ್ಲಿಯೇ ಸುಲಭವಾಗಿ ಕೂದಲಿನ ಆರೈಕೆ ಮಾಡಿಕೊಳ್ಳುವುದು ಹೇಗೆ..?
ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇದು ಕೂಡ ತಲೆಗೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ತಲೆಗೂದಲು ಹೈಡ್ರೇಟೆಡ್ ಮತ್ತು ಆರೋಗ್ಯಕರವಾಗಿರುತ್ತದೆ. ಪ್ರತಿದಿನ ಕನಿಷ್ಠ ೨-೪ ಲೀಟರ್ ನೀರು ಸೇವಿಸಬೇಕು.
ದೀರ್ಘಕಾಲದ ಒತ್ತಡವು ಕೂದಲಿನ ಬೆಳವಣಿಗೆಗೆ ಅಡ್ಡಿಪಡಿಸುವ ಮೂಲಕ ತಲೆಗೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಧ್ಯಾನ, ಯೋಗ, ಆಳವಾದ ಉಸಿರಾಟದ ವ್ಯಾಯಾಮಗಳು ಮತ್ತು ನಿಯಮಿತ ದೈಹಿಕ ಚಟುವಟಿಕೆಯಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಇದು ಕೂದಲಿನ ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೇಹಕ್ಕೆ ಸಾಕಷ್ಟು ನಿದ್ದೆಯ ಅವಶ್ಯಕತೆಯೂ ಇದೆ. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಆಗಾಗ ತಲೆಗೂದಲನ್ನು ಸ್ಟ್ರೈಟ್ನಿಂಗ್ ಮಾಡುವುದರಿಂದ ಶಾಖ ತಾಗಿ, ತಲೆಗೂದಲಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ತಲೆಗೂದಲಿಗೆ ರಾಸಾಯನಿಕ ಚಿಕಿತ್ಸೆಗಳನ್ನು ಮಾಡುವುದು, ಬಿಗಿಯಾದ ಕೇಶವಿನ್ಯಾಸಗಳ ಅತಿಯಾದ ಬಳಕೆ ಸಹ ತಲೆಗೂದಲನ್ನು ಹಾನಿಗೊಳಿಸುತ್ತದೆ ಹಾಗೂ ಬೆಳವಣಿಗೆ ತಡೆಯುತ್ತದೆ. ಹೀಗಾಗಿ ಹೇರ್ ಡ್ರೈಯರ್‌ಗಳು, ಸ್ಟ್ರೈಟ್‌ನರ್‌ಗಳು ಮತ್ತು ಕರ್ಲಿಂಗ್ ಐರನ್‌ಗಳ ಬಳಕೆಯನ್ನು ಆದಷ್ಟು ಮಿತಿಗೊಳಿಸಿ. ತಲೆಗೂದಲ ಹಾನಿಯನ್ನು ತಡೆಗಟ್ಟಲು ಶಾಖ ರಕ್ಷಕಗಳನ್ನು ಬಳಸಿ.
ನಿಯಮಿತವಾಗಿ ನೆತ್ತಿಯ ಮಸಾಜ್ ಮಾಡುವುದರಿಂದ ತಲೆಗೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. ಬೇಕಾದ್ರೆ ನೆತ್ತಿಗೆ ಮಸಾಜ್ ಮಾಡುವ ಸಾಧನವನ್ನು ಬಳಸಬಹುದು. ಮಸಾಜ್ ಮಾಡುವ ವೇಳೆ ತೆಂಗಿನ ಎಣ್ಣೆ ಅಥವಾ ಇನ್ನಿತರೆ ನೈಸರ್ಗಿಕ ತೈಲಗಳ ಬಳಕೆಗೆ ಆದ್ಯತೆ ನೀಡಿ. ಈ ತೈಲಗಳು ನೆತ್ತಿಯನ್ನು ತೇವಗೊಳಿಸಲು ಮತ್ತು ತಲೆಗೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಮಾಲಿನ್ಯ, ಯುವಿ ಕಿರಣಗಳು ಮತ್ತು ಇನ್ನಿತರೆ ಕಾರಣಗಳಿಂದ ತಲೆಗೂದಲು ದುರ್ಬಲಗೊಳ್ಳಬಹುದು. ಇದರಿಂದ ತಲೆಗೂದಲಿನ ಬೆಳವಣಿಗೆ ನಿಧಾನಗೊಳ್ಳಬಹುದು. ಹೀಗಾಗಿ ಸೂರ್ಯನ ಶಾಖ ಅಥವಾ ಅತಿಹೆಚ್ಚು ಗಾಳಿ ಇದ್ದರೆ ಈ ವೇಳೆ ತಲೆಗ ಟೋಪಿ ಅಥವಾ ಸ್ಕಾರ್ಫ್ ಧರಿಸಬೇಕು.
ಪೋಷಕಾಂಶಗಳನ್ನು ಆಹಾರದಿಂದ ಪಡೆಯುವುದು ಕಷ್ಟಕರವಾಗಿದ್ದರೆ ನೇರವಾಗಿ ಬಯೋಟಿನ್, ವಿಟಮಿನ್ ʼಡಿʼ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ತೆಗೆದುಕೊಳ್ಳಬಹುದು. ಆದರೆ ಇದನ್ನು ತೆಗೆದುಕೊಳ್ಳುವ ಮುನ್ನ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಬಹಳ ಮುಖ್ಯ. ಏಕೆಂದರೆ ಕೆಲವು ಪೋಷಕಾಂಶಗಳ ಅತಿಯಾದ ಸೇವನೆಯು ಪ್ರತಿಕೂಲ ಪರಿಣಾಮ ಉಂಟುಮಾಡಬಹುದು.
ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಗೆ ಅಡಿಪಾಯವಾಗಿದೆ. ತಲೆಗೂದಲನ್ನು ನಿಯಮಿತವಾಗಿ ತೊಳೆಯುವ ಮೂಲಕ ನೆತ್ತಿಯನ್ನು ಸ್ವಚ್ಛವಾಗಿರಿಸಿಕೊಳ್ಳಿ. ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ತಲೆಹೊಟ್ಟು, ಶುಷ್ಕತೆ ಮತ್ತು ಕಿರಿಕಿರಿಯಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಉತ್ತಮ ನೈರ್ಮಲ್ಯ ಅಭ್ಯಾಸಗಳು, ಸಮತೋಲಿತ ಪೋಷಣೆ ಮಾಡುವುದು ತಲೆಗೂದಲಿನ ಆರೈಕೆಗೆ ಬಹಳ ಮುಖ್ಯ.