Hair Care Tips: ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಇದು ರಾಮಬಾಣ

Sun, 07 Nov 2021-1:36 pm,

ಕೂದಲಿನ ಸೌಂದರ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು ನೀವು ಮನೆಯಲ್ಲಿ ಚಹಾ ಎಲೆಯ ನೀರನ್ನು ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಚಹಾ ಎಲೆಗಳನ್ನು ಸೇರಿಸಿ. ಈಗ ಈ ನೀರನ್ನು ಕುದಿಸಲು ಗ್ಯಾಸ್ ಮೇಲೆ ಹಾಕಿ. ಈ ನೀರು ಐದರಿಂದ ಏಳು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಇದರ ನಂತರ ಗ್ಯಾಸ್ ಆಫ್ ಮಾಡಿ ಮತ್ತು ನೀರನ್ನು ತಣ್ಣಗಾಗಲು ಬಿಡಿ. ನೀರು ಸಂಪೂರ್ಣವಾಗಿ ತಣ್ಣಗಾದ ಬಳಿಕ ಇದನ್ನು ಬಳಸಿ.

ಮೊದಲಿಗೆ ಶಾಂಪೂವಿನಿಂದ ನಾರ್ಮಲ್ ಸ್ನಾನ ಮಾಡಿರಿ. ನಂತರ ಚಹಾ ಎಲೆಗಳ ತಣ್ಣನೆಯ ನೀರನ್ನು ಒಂದು ಮಗ್‌ನಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಸುರಿಯಿರಿ. ಈ ನೀರಿನಿಂದ ಕೂದಲನ್ನು ಚೆನ್ನಾಗಿ ನೆನೆಯಲು ಬಿಡಿ. ಈಗ ಒಂದು ನಿಮಿಷ ಹಗುರವಾಗಿ ಕೈಗಳಿಂದ ಕೂದಲನ್ನು ಉಜ್ಜಿಕೊಳ್ಳಿ ಮತ್ತು ಹಳೆಯ ಟವೆಲ್ ನಿಂದ ಕೂದಲನ್ನು ಕಟ್ಟಿಕೊಳ್ಳಿ. ಇದರ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿ ಚಮತ್ಕಾರ ನೋಡಿ.

2 ಚಮಚ ಚಹಾ ಎಲೆಗಳನ್ನು ಒಂದು ಮಗ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ಈಗ ಗ್ಯಾಸ್ ಆಫ್ ಮಾಡಿ ನೀರನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಈ ನೀರನ್ನು ಹೇರ್ ಕಲರ್ ಬ್ರಶ್ ನ ಸಹಾಯದಿಂದ ಕೂದಲಿಗೆ ಕಲರ್ ನಂತೆ ಹಚ್ಚಿಕೊಳ್ಳಿ. ನಿಮ್ಮ ಕೂದಲಿಗೆ ಹಚ್ಚಿದ 1 ಗಂಟೆಯ ನಂತರ ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಈ ರೀತಿ ಮಾಡಬೇಕು

ಕೂದಲಿನ ಆರೈಕೆ ಮತ್ತು ಆರೋಗ್ಯಕ್ಕೆ ನೀವು ಹಸಿರು ಚಹಾವನ್ನು ಸಹ ಬಳಸಬಹುದು. B ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಹಸಿರು ಚಹಾವು ನಿಮ್ಮ ಕೂದಲನ್ನು moisturizing ಮಾಡಲು ಮತ್ತು ಸದಾ ಹೊಳೆಯುವಂತಿರಲು ಸಹಾಯ ಮಾಡುತ್ತದೆ.

ನಿಮಗೆ ಕೂದಲು ಉದುರುವ ಸಮಸ್ಯೆ ಇದ್ದರೆ ಚಹಾ ಬಳಸುವುದು ರಾಮಬಾಣ. ವಾಸ್ತವವಾಗಿ ಚಹಾವು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಚಹಾ ನಿಮಗೆ ಸಹಾಯ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link