Hair Care: ಕೂದಲು ಉದುರದೇ... ಕಪ್ಪಾಗಿ ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ಸಾಕು!!
)
ಇಂದಿನ ಜನರ ಸಾಮಾನ್ಯ ಸಮಸ್ಯೆಯಾದ ಕೂದಲು ಉದುರುವಿಕೆಯನ್ನು ತಡೆಯಲು ಸಾಕಷ್ಟು ಹರಸಾಹಸ ಪಟ್ಟಿರುವವರಿದ್ದಾರೆ.. ಅವರಿಗಾಗಿಯೇ ಇಂದು ಎಫೆಕ್ಟಿವ್ ಮನೆಮದ್ದನ್ನು ಹೇಳಲಿದ್ದೇವೆ..
)
ಕೂದಲು ಉದುರುವಿಕೆಯನ್ನು ತಡೆಯಲು ಒಂದು ಬಟ್ಟಲಿನಷ್ಟು ಕೊಬ್ಬರಿ ಎಣ್ಣೆ, ತುರಿದ ಬೆಟ್ಟದ ನೆಲ್ಲಿಕಾಯಿ, ಒಂದು ಚಮಚ ಸಾಸಿವೆ, ಹಿಡಿ ಕರಿಬೇವು, ಒಂದು ಚಮಚ ಮೆಂತ್ಯೆ ತೆಗೆದುಕೊಳ್ಳಿ..
)
ಒಂದು ಬಾನಲಿಯನ್ನು ಕಾಯಲು ಇಡಿ.. ನಂತರ ಅದಕ್ಕೆ ತೆಗೆದುಕೊಂಡಿರುವ ತೆಂಗಿನ ಎಣ್ಣೆಯನ್ನು ಹಾಕಿ, ಕಾದ ನಂತರ ಅದಕ್ಕೆ ರೆಡಿಮಾಡಿಕೊಂಡಿರುವ ಪದಾರ್ಥಗಳನ್ನು ಹಾಕಿ ಏಳರಿಂದ-ಹತ್ತು ನಿಮಿಷದವರೆಗೂ ಹೀಟ್ ಮಾಡಿ.
ನಂತರ ಅದನ್ನು ಸೂಸಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ.. ಆದರೆ ಇದನ್ನು ಬಳಸುವಾಗ ಪ್ರತಿ ಬಾರೀ ಬೆಚ್ಚಗೆ ಮಾಡಿಯೇ ಬಳಸಬೇಕು.. ಅಂದಾಗ ಮಾತ್ರ ಇದರ ರಿಸಲ್ಟ್ ಉತ್ತಮವಾಗಿರುತ್ತದೆ.
ಈ ರೀತಿ ಸ್ಟೋರ್ ಮಾಡಿರುವ ಈ ಎಣ್ಣೆಯನ್ನು ಮೂರು ವಾರಗಳವರೆಗೂ ಬಳಸಬಹುದು.. ಈ ಎಣ್ಣೆಯನ್ನು ತಯಾರಿಸಲು ಬಳಸಿದ ಪ್ರತಿ ಪದಾರ್ಥದಲ್ಲಿಯೂ ಕೂದಲು ಉದುರುವ ಸಮಸ್ಯೆಯನ್ನು ತಡೆಯುವ ಅಂಶಗಳಿವೆ..
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)