ಮಹಿಳೆಯರ ದೇಹದ ‘ಆ’ ಭಾಗದಲ್ಲಿ ಕೂದಲು ಬೆಳೆದಿದ್ದರೆ ಅವರಷ್ಟು ಲಕ್ಕಿ ಜಗತ್ತಲ್ಲಿ ಬೇರಾರು ಇರಲ್ಲ!

Tue, 11 Jun 2024-5:05 pm,

ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ, ದೇಹದಲ್ಲಿ ಬೆಳೆಯುವ ಕೂದಲನ್ನು ಗಮನಿಸಿ ಅದು ಶುಭವೋ ಅಥವಾ ಅಶುಭವೋ ಎಂಬುದನ್ನು ಪರೀಕ್ಷಿಸಬಹುದು. ಅದರಲ್ಲೂ ಕೆಲವೊಂದು ಅಂಗಗಳಲ್ಲಿ ಬೆಳೆಯುವ ಕೂದಲು ವ್ಯಕ್ತಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ.

ಅನೇಕ ಜನರ ಕಿವಿಯಲ್ಲಿ ಕೂದಲು ಇರುವುದನ್ನು ನೀವು ಗಮನಿಸಿರಬೇಕು. ಕಿವಿಯಲ್ಲಿ ಕೂದಲು ಇರುವುದು ಕೂಡ ಮಂಗಳಕರ. ಅಂತಹ ಜನರಿಗೆ ಸಾಕಷ್ಟು ಧನ ಪ್ರಾಪ್ತಿಯಾಗುವುದಲ್ಲದೆ, ಆರಾಮದಾಯಕ ಜೀವನವನ್ನು ನಡೆಸುತ್ತಾರೆ. ಜೊತೆಗೆ ಇಂತಹ ಜನರು ಪ್ರತಿಭಾವಂತರು ಸಹ ಆಗಿರುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ, ಪುರುಷರಿಗೆ ಎದೆಯ ಮೇಲೆ ಕೂದಲು ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಮಹಿಳೆಯರು ಅನಗತ್ಯ ಕೂದಲನ್ನು ವ್ಯಾಕ್ಸಿಂಗ್ ಮಾಡಿ ತೆಗೆಯುತ್ತಾರೆ. ಆದರೆ ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿ ಕೂದಲು ಇರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರ ತೋಳುಗಳ ಮೇಲೆ ಹೆಚ್ಚು ಕೂದಲು ಬೆಳೆಯುತ್ತಿದ್ದರೆ, ಜ್ಯೋತಿಷ್ಯದಲ್ಲಿ ಅದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಕೆಲವು ಮಹಿಳೆಯರಿಗೆ ಎದೆಯ ಮೇಲೂ ಕೂದಲು ಇರುತ್ತದೆ. ಅಂತಹ ಮಹಿಳೆಯರಿಗೂ ಅದೃಷ್ಟ ಹುಡುಕಿ ಬರುತ್ತದೆ

ಕೈ ಕಾಲುಗಳಲ್ಲಿ ಹೆಚ್ಚು ಕೂದಲು ಇರುವವರು ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣುತ್ತಾರೆ. ಅವರ ಜೀವನದಲ್ಲಿ ಸಂತೋಷವು ಹೆಚ್ಚು ಕಾಲ ಉಳಿಯುವುದಿಲ್ಲ. ತೊಂದರೆಗಳು ಬಂದು ಹೋಗುತ್ತವೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆನ್ನಿನ ಮೇಲೆ ಕೂದಲು ಇದ್ದರೆ ಅಂತಹವರು ಧೈರ್ಯಶಾಲಿಗಳು ಎಂದು ಸಮುದ್ರ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಜನರನ್ನು ನಿಷ್ಠಾವಂತ ಮತ್ತು ಜವಾಬ್ದಾರಿಯುತ ಎಂದು ಪರಿಗಣಿಸಲಾಗುತ್ತದೆ. ಬೆನ್ನಿನ ಮೇಲೆ ಕೂದಲು ಇರುವವರು ಸಂಪತ್ತಿನ ದೃಷ್ಟಿಯಿಂದ ತುಂಬಾ ಅದೃಷ್ಟವಂತರು.

(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇವುಗಳನ್ನು ದೃಢೀಕರಿಸುವುದಿಲ್ಲ. ಯಾವುದೇ ಮಾಹಿತಿಯನ್ನು ಅಳವಡಿಸುವ ಮೊದಲು, ಸಂಬಂಧಪಟ್ಟ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link