ವಿದೇಶಿ ಕನ್ಯೆ ಕೈ ಹಿಡಿದ ಹಂಪಿ ಆಟೋ ಚಾಲಕ : ಅನಂತನ ಪ್ರಾಮಾಣಿಕತೆಗೆ ಕೆಮಿಲ್ ಫಿದಾ..!
ಕೊರೊನಾ ಮಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು. ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ನಿನ್ನೆ ಸಂಜೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಜೀಪ್ ಫಿಲಿಪ್ಪೆ ದಂಪತಿಗಳ ತೃತೀಯ ಪುತ್ರಿ ಕೆಮಿಲ್ ಮತ್ತು ಹಂಪಿ ಜನತಾ ಪ್ಲಾಟ್ ನಿವಾಸಿ ದಿ. ಅಂಜಿನಪ್ಪ ಅವರ ಜೇಷ್ಠ ಪುತ್ರ ಅನಂತರಾಜು ಜೊತೆ ಮೂರು ವರ್ಷದ ಹಿಂದೆಯೇ ಮದುವೆ ಆಗ್ಬೇಕಿತ್ತು.
ನಾಲ್ಕೈದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ. ಆಟೋ ಚಾಲಕನಾಗಿ ಅನಂತರಾಜು ಕೆಲಸ ಮಾಡುತ್ತಿದ್ದಾರೆ. ಬೆಲ್ಜಿಯಂ ಕನ್ಯೆ ಕೆಮಿಲ್ ಸೋಷಿಯಲ್ ವರ್ಕರ್ ಆಗಿದ್ದಾರೆ. ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬ ಅನಂತರಾಜು ಪ್ರಾಮಾಣಿಕತೆಗೆ ಮನಸೋತಿದ್ದರು.
ಇಂದು ಬೆಳಗಿನ ಜಾವ 9.25 ರ ಕುಂಭ ಲಗ್ನದ ಶುಭಮುಹೂರ್ತದಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದರು.