ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!
ಮಳೆಗಾಲ ಬಂತೆಂದರೆ ಸಾಕು ಕೀಟಗಳು ಮನೆಗೆ ಎಂಟ್ರಿಕೊಡುತ್ತವೆ. ಇದರಿಂದಾಗಿ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ.
ಕೆಲವೊಂದು ಗಿಡಗಳನ್ನು ಮನೆಯ ಮುಂದೆ ತೂಗು ಹಾಕಿದರೆ ಹಲ್ಲಿ, ಜೇಡ, ಇರುವೆ, ನೊಣ, ಸೊಳ್ಳೆಗಳಂತಹ ಕೀಟಗಳಿಂದ ಮುಕ್ತಿ ಪಡೆಯಬಹುದು.
ಲ್ಯಾವೆಂಡರ್ ಸಸ್ಯವು ಕೀಟಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿ. ಮಳೆಗಾಲದ ದಿನಗಳಲ್ಲಿ ಮನೆಯೊಳಗೆ ಕಪ್ಪೆಗಳು ಬರುತ್ತವೆ. ಹೀಗಿರುವಾಗ ಈ ಗಿಡವನ್ನು ನೆಟ್ಟರೆ, ಕಪ್ಪೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ತುಳಸಿ ಅನೇಕ ಪ್ರಯೋಜನಗಳನ್ನು ಒಳಗೊಂಡ ಸಸ್ಯ. ಸಾಮಾನ್ಯವಾಗಿ ಹಿಂದೂ ಧರ್ಮದವರ ಮನೆಯಲ್ಲಿ ಈ ಗಿಡ ಪೂಜಿಸಲ್ಪಡುತ್ತದೆ. ಅಂದಹಾಗೆ ಈ ತುಳಸಿ ಗಿಡ ಇದ್ದಲ್ಲಿ ಸೊಳ್ಳೆ ಕಾಟ ಕಡಿಮೆ ಇರುತ್ತದೆ.
ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲದೆ, ಇದು ಕೀಟಗಳ ಶತ್ರುವೂ ಹೌದು. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಗಿಡವನ್ನು ಬೆಳೆಸಿದರೆ ಜೇಡಗಳು ಬರುವುದಿಲ್ಲ.
ಮಳೆಗಾಲದ ದಿನಗಳಲ್ಲಿ ಪುದೀನಾ ಗಿಡ ಬಹಳ ಸುಲಭವಾಗಿ ಬೆಳೆಯುತ್ತದೆ. ಇದನ್ನು ಬೆಳೆಸಿದರೆ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು.
ಬೇವು ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ಮಳೆಗಾಲದಲ್ಲಿ ಈ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು. ಇದು ಕೀಟಗಳು ಮತ್ತು ಸೊಳ್ಳೆಗಳನ್ನು ಓಡಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.