Hans Rajyog: April 29 ರಿಂದ ನಿರ್ಮಾಣಗೊಂಡಿದೆ `ಹಂಸ ರಾಜಯೋಗ`, ಈ ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

Fri, 05 May 2023-6:17 pm,

ಕರ್ಕ ರಾಶಿ:  ಕರ್ಕ ರಾಶಿಯ ಜನರ ಪಾಲಿಗೆ ಹಂಸ ರಾಜಯೋಗ ವಿಶೇಷ ಲಾಭಗಳನ್ನು ನೀಡಲಿದೆ. ಈ ರಾಶಿಯ ನೌಕರ ವರ್ಗದ ಜನರು ಮತ್ತು ಉದ್ಯಮಿಗಳು ಇದರಿಂದ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ದೀರ್ಘಕಾಲದಿಂದ ನೀವು ನಿರೀಕ್ಷಿಸುತ್ತಿರುವ ಉಡುಗೊರೆಗಳು ನಿಮಗೆ ಪ್ರಾಪ್ತಿಯಾಗಲಿವೆ. ಇದಲ್ಲದೆ, ನೀವು ಪ್ರತಿ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ, ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ ಮತ್ತು ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಲಿದೆ.  

ಧನು ರಾಶಿ : ಹಂಸ ರಾಜಯೋಗವು ಧನು ರಾಶಿಯ ಜನರಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಹಠಾತ್ ಧನಲಾಭ ಪಡೆಯುವ ಸಾಧ್ಯತೆ ಇದೆ. ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಮತ್ತು ಅವರು ಅದನ್ನು ನಿಮಗೆ ಇದುವರೆಗೂ ಹಿಂದಿರುಗಿಸಿಲ್ಲ ಎಂದಾದಲ್ಲಿ, ಶೀಘ್ರದಲ್ಲೇ ನೀವು ನಿಮ್ಮ ಹಣ ನಿಮ್ಮ ಕೈಸೇರಲಿದೆ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ಮತ್ತು ಈ ಸಮಯದಲ್ಲಿ ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು.  

ಮೀನ ರಾಶಿ: ಗುರು ಗ್ರಹದಿಂದ ರೂಪುಗೊಂಡ ಈ ಹಂಸ ರಾಜಯೋಗ ಒಂದು ಅತ್ಯಂತ ಮಂಗಳಕರ ಯೋಗವಾಗಿದ್ದು, ಮೀನ ರಾಶಿಯವರಿಗೆ ಇದು ಅತ್ಯಂತ ಮಂಗಳಕರವಾಗಿರುತ್ತದೆ. ಈ ಯೋಗದಿಂದ ಮೀನ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ, ಇವರು ಎಲ್ಲಾ  ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವರು, ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಅಪಾರ ಬೆಂಬಲ ಸಿಗಲಿದೆ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ, ವ್ಯಾಪಾರದಲ್ಲಿ ಹೆಚ್ಚಿನ ಲಾಭ ಉಂಟಾಗಲಿದೆ, ಆದರೆ ಪ್ರಸ್ತುತ ನಿಮ್ಮ ಜಾತಕದಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿರುವ ಕಾರಣ ಆರೋಗ್ಯದ ಬಗ್ಗೆ ಸ್ವಲ್ಪ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link