Hanuman Chalisa: ಹನುಮಾನ್ ಚಾಲೀಸಾ ಓದುವುದರಿಂದ ದೊರೆಯುವ ಲಾಭಗಳು

Tue, 01 Oct 2024-10:19 pm,

ತುಳಸೀದಾಸ ವಿರಚಿತ ಹನುಮಾನ್ ಚಾಲೀಸಾ ಅತ್ಯಂತ ಪವರ್ ಫುಲ್ ಮಂತ್ರವಾಗಿದೆ. ಇದನ್ನು ಶನಿವಾರಗಳಂದು ಓದುವುದರಿಂದ ವಿಶೇಷ ಪ್ರಯೋಜನ ಸಿಗುತ್ತದೆ. 

ವಿಶೇಷವಾಗಿ ಸಾಡೇ ಸಾತಿಯಂತಹ ಕಷ್ಟಕರ ಶನಿದೋಷದಿಂದ ಬಳಲುತ್ತಿದ್ದರೆ ಹನುಮಾನ್ ಚಾಲೀಸಾವನ್ನು ಓದಬೇಕು. ಸಂಜೆ ಅಥವಾ ಬೆಳಗಿನ ಅವಧಿಯಲ್ಲಿ ಹನುಮಾನ್ ಚಾಲೀಸಾ ಓದಲು ಸೂಕ್ತ ಸಮಯವಾಗಿದೆ.

ಹನುಮಾನ್ ಚಾಲೀಸಾ ಮಂತ್ರವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನಿರಂತರವಾಗಿ 40 ದಿನಗಳ ಕಾಲ ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಕಾಣುವಿರಿ. 

ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಮನಸ್ಸಿನಲ್ಲಿ ಅಧೈರ್ಯ, ಶಂಕೆ ಇದ್ದರೆ, ವೃತ್ತಿ, ವಿದ್ಯಾಭ್ಯಾಸದಲ್ಲಿ ತೊಂದರೆಗಳಿದ್ದರೆ, ಹಣಕಾಸಿನ ವಿಚಾರದಲ್ಲಿ ತೊಂದರೆಗಳಿದ್ದರೆ ಹನುಮಾನ್ ಚಾಲೀಸಾವನ್ನು ಓದುವುದರಿಂದ ನಿವಾರಣೆಯಾಗುವುದು. 

ಹನುಮಾನ್ ಬುದ್ಧಿವಂತಿಕೆಗೆ ಮತ್ತು ಶೌರ್ಯಕ್ಕೆ ಅಧಿಪತಿ. ಆತನನ್ನು ಕುರಿತು ಮಾಡುವ ಹನುಮಾನ್ ಚಾಲೀಸಾ ಭಜನೆಯಿಂದ ನೀವು ಕೀರ್ತಿ ಸಂಪಾದಿಸುವಿರಿ. ಜೊತೆಗೆ ಅಪಘಾತ ಭಯ, ಮಾನಸಿಕ ಒತ್ತಡಗಳು ಸಹ ಇದನ್ನು ಪಠಿಸುವುದರಿಂದ ದೂರವಾಗುವುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link