ಹನುಮಾನ್ ಸಂಭ್ರಮ: ವಿದ್ಯುದೀಪಗಳಿಂದ ಅಲಂಕಾರಗೊಂಡ ಅಂಜನಾದ್ರಿ

Fri, 22 Dec 2023-10:31 pm,

ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸರ್ಪಗಾವಲಿಟ್ಟಿದೆ.

2 ಎಎಸ್‌ಪಿ, 6 ಡಿಎಸ್‌ಪಿ, 26 ಸಿಪಿಐ, 62 ಪಿಎಸ್‌ಐ, 94 ಎಎಸ್‌ಐ, 967 ಹೆಡ್ ಕಾನ್‌ಸ್ಟೇಬಲ್ ಪೊಲೀಸ್ ಕಾನ್‌ಸ್ಟೇಬಲ್ ಮಹಿಳಾ ಪೊಲೀಸ್, 500 ಗೃಹರಕ್ಷಕ ದಳ, 12 ಡಿಎಆರ್, 5 ಐಆರ್‌ಬಿ ಮತ್ತು ಕೆಎಸ್‌ಆರ್‌ಪಿ ತುಕುಡಿ ಸೇರಿದಂತೆ 1657 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಗೃಹರಕ್ಷಕ ದಳದವರನ್ನು ಕಾರ್ಯಕ್ರಮಕ್ಕೆ ನಿಯೋಹಿಸಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧೆಡೆ ಡೈವರ್ಸನ್ ಪಾಯಿಂಟ್‌ಗಳನ್ನು ತೆರೆಯಲಾಗಿದೆ. ಐಸ್‌ಲ್ಯಾಂಡ್, ಸಿ.ಬಿ. ಸರ್ಕಲ್., ರಾಯಚೂರು ಸರ್ಕಲ್., ಜುಲೈ ನಗರ ಕ್ರಾಸ್., ಜಂಗಮರ ಕಲ್ಗುಡಿ ಕ್ರಾಸ್., ಹೊಸಳ್ಳಿ ಕ್ರಾಸ್., ಕಡೇಬಾಗಿಲು ಕ್ರಾಸ್., ಸಣಾಪೂರ ಕ್ರಾಸ್ ಮತ್ತು ಶಿವಪುರ ಕ್ರಾಸ್ ಸೇರಿದಂತೆ 9 ಕಡೆಗಳಲ್ಲಿ ಡಿವರ್ಸನ್ ಪಾಯಿಂಟ್ ತೆರೆಯಲಾಗಿದೆ.

ಅಲಂಕಾರಕ್ಕೆ ಮೆಚ್ಚುಗೆ: ಡಿಸೆಂಬರ್ 22ರಂದು ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುದೀಪಗಳಿಂದ ಅಲಂಕೃತಗೊಂಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಹನುಮಮಾಲಾ ಕಾರ್ಯಕ್ರಮದ ಮುನ್ನಾ ದಿನವಾದ ಡಿಸೆಂಬರ್ 22ರಂದು ಅಂಜನಾದ್ರಿಯ ಬೆಟ್ಟವು ಬಗೆಬಗೆಯ ಬಣ್ಣದ ವಿದ್ಯೂದೀಪಗಳಿಂದ ಅಲಂಕಾರಗೊಂಡು ಜನಮನ ಸೆಳೆಯುತ್ತಿದೆ.

 

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಲಂಕಾರ ಸಮಿತಿಯನ್ನು ರಚಿಸಿ ಬೆಟ್ಟದ ಅಲಂಕಾರಕ್ಕು ಸಹ ಅಷ್ಟೇ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮೇಲಿಂದ ಮೇಲೆ ನಿರ್ದೇಶನ ನೀಡಿ ಮಾರ್ಗದರ್ಶನ ಮಾಡಿದ್ದರು.

 

ಜನರಿಗೆ ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link