Hanuman Janmotsav 2022: ಆಂಜನೇಯನ ಪೂಜೆ ವೇಳೆ ಯಾವುದೇ ಕಾರಣಕ್ಕೂ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ
ಹಿಂದೂ ಧರ್ಮದ ಹೊರತಾಗಿ, ಜ್ಯೋತಿಷ್ಯದಲ್ಲಿ ಹನುಮಾನ್ ಜಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಹನುಮಂತನ ಕೃಪೆಗೆ ಪಾತ್ರರಾದರೆ, ಅಶುಭ ಗ್ರಹಗಳ ಪ್ರಭಾವವೂ ದೂರವಾಗುತ್ತದೆ. ಆದರೆ ಹನುಮಾನ್ ಜೀ ಪೂಜೆಯ ವೇಳೆ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು.
ಮಂಗಳವಾರ ಮತ್ತು ಶನಿವಾರದಂದು ಮಾಂಸಾಹಾರ ಮದ್ಯಪಾನದಿಂದ ದೂರವಿರಿ. ಆಂಜನೇಯ ಪೂಜೆ ವೇಳೆ ಯಾವುದೇ ಕಾರಣಕ್ಕೂ ಮಾಂಸಾಹಾರ-ಮದ್ಯ ಸೇವಿಸಬಾರದು.
ಹನುಮಾನ್ ಜೀ ಪೂಜೆಯ ಸಮಯದಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಡಿ.
ಯಾವಾಗಲೂ ಬೆಳಿಗ್ಗೆ ಅಥವಾ ಸಂಜೆ ಆಂಜನೇಯನ ಪೂಜೆ ಮಾಡಬೇಕು. ಬಜರಂಗಬಲಿಯನ್ನು ಮಧ್ಯಾಹ್ನ ಅಥವಾ ರಾತ್ರಿಯ ವೇಳೆ ಪೂಜಿಸಬಾರದು.
ಹನುಮಾನ್ ಜೀ ಪೂಜೆ ಮಾಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ. ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ .
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)