Hanuman Jayanti 2021: ಈ ಬಾರಿಯ ಹನುಮ ಜಯಂತಿಯಂದು ನಿರ್ಮಾಣಗೊಳ್ಳುತ್ತಿವೆ ಈ ಎರಡು ಯೋಗಗಳು

Fri, 16 Apr 2021-8:57 pm,

1. ಆ ಎರಡು ಯೋಗಗಳು ಯಾವುವು? - ಈ ಬಾರಿಯ ಹನುಮ ಜಯಂತಿಯ ದಿನ ಅಂದರೆ 27 ಏಪ್ರಿಲ್ 2021 ರಂದು ಸಿದ್ಧಿ ಹಾಗೂ ವ್ಯತಿಪಾತ ಯೋಗಗಳು ಸಂಭವಿಸುತ್ತಿವೆ. ಹನುಮ ಜಯಂತಿಯ ದಿನ ಸಂಜೆ 8 ಗಂಟೆ 3 ನಿಮಿಷದವರೆಗೆ ಸಿದ್ಧಿ ಯೋಗ ಇರಲಿದ್ದು, ಬಳಿಕ ವ್ಯತಿಪಾತ ಯೋಗ ಆರಂಭಗೊಳ್ಳಲಿದೆ.

2. ಸಿದ್ಧಿ ಯೋಗ ಯಾವಾಗ ಆರಂಭ ? (Auspicious Yog)-ವಾರ, ತಿಥಿ ಹಾಗೂ ನಕ್ಷತ್ರಗಳ ಮಧ್ಯೆ ಹೊಂದಾಣಿಕೆಯಿಂದ ಸಿದ್ಧಿ ಯೋಗ ನಿರ್ಮಾಣಗೊಳ್ಳಲಿದೆ.

3. ಸಿದ್ಧಿಯೋಗದ ಮಹತ್ವವೇನು? - ಧಾರ್ಮಿಕ ಮಾನ್ಯತೆಗಳ ಪ್ರಕಾರ ಸಿದ್ಧಿಯೋಗದ ಅಧಿಪತಿ ಶ್ರೀ ಸಿದ್ಧಿವಿನಾಯಕನಾಗಿದ್ದಾನೆ. ಈ ಯೋಗದಲ್ಲಿ ಆರಂಭಗೊಳ್ಳುವ ಕಾರ್ಯಗಳು ಯಾವುದೇ ರೀತಿಯ ಅಡೆತಡೆ ಅಥವಾ ವಿಘ್ನಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಕಾರ್ಯಸಿದ್ಧಿ ಪ್ರಾಪ್ತಿಗಾಗಿ ಈ ಯೋಗ ಉತ್ತಮ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಆಂಜನೇಯನ ಪೂಜೆ ಮಾಡುವುದು ಅತ್ಯಂತ ಶುಭಕರ ಮತ್ತು ಫಲದಾಯಕ ಎಂದು ಭಾವಿಸಲಾಗುತ್ತದೆ.

4. ವ್ಯತಿಪಾತ ಯೋಗ - ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಯೋಗವನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ಅವಧಿಯಲ್ಲಿ ಮಂತ್ರಗಳ ಜಪ, ಗುರುಪೂಜೆ, ಉಪವಾಸ ಇತ್ಯಾದಿಗಳನ್ನು ಕೈಗೊಳ್ಳುವುದಕ್ಕೆ ಭಾರಿ ಮಹತ್ವವಿದೆ.

5. ಹನುಮ ಜಯಂತಿ ಈ ನಕ್ಷತ್ರದಲ್ಲಿ ಆಚರಿಸಬೇಕು? (Hanuman Jayanti 2021 Shubh Muhurat)- ಹನುಮ ಜಯಂತಿಯ ದಿನ ಸಂಜೆ 8 ಗಂಟೆ 8 ನಿಮಿಷಕ್ಕೆ ಸ್ವಾತಿ ನಕ್ಷತ್ರ ಇರಲಿದೆ ಹಾಗೂ ಆ ಬಳಿಕ ವಿಶಾಖಾ ನಕ್ಷತ್ರ ಆರಂಭಗೊಳ್ಳಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link