Hanuman Jayanti 2022: ಹನುಮ ಜಯಂತಿಯ ದಿನ ಈ 5 ಕೆಲಸಗಳನ್ನು ಮಾಡಲು ಮರೆಯಬೇಡಿ, ಜೀವನದ ಎಲ್ಲಾ ಸಂಕಷ್ಟ ಪರಿಹಾರವಾಗುತ್ತದೆ
1. ನಕಾರಾತ್ಮಕ ಶಕ್ತಿ ತೊಲಗಿಸಲು ಏನು ಮಾಡಬೇಕು - ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮ ಜಯಂತಿಯ ದಿನ ಹನುಮಂತದ ದೋಹಾ ಪಠಿಸುವವರ ಹತ್ತಿರ ಭೂತ, ಪ್ರೇತ ಹಾಗೂ ನಕಾರಾತ್ಮಕ ಶಕ್ತಿಗಳು ಸುಳಿಯುವುದಿಲ್ಲ. ಹೀಗಾಗಿ 'ಬೂತ-ಪ್ರೇತ ನಿಕಟ ನಹಿ ಆವೆ, ಮಹಾವೀರ ಜಬ ನಾಮ ಸುನಾವೆ' ಪಠಿಸಿ.
2. ಭಯವನ್ನು ದೂರಗೊಳಿಸಲು ಈ ಕೆಲಸ ಮಾಡಿ - ಹಲವು ಬಾರಿ ಜನರಿಗೆ ಕೆಲ ಸಂಗತಿಗಳ ಭಯ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹನುಮ ಜಯಂತಿಯ ದಿನ ಬೆಳಗ್ಗೆ ಆಂಜನೇಯ ಸ್ವಾವಿ ದೇವಸ್ಥಾನಕ್ಕೆ ತೆರಳಿ 1100 ಬಾರಿ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಿ. ಜಪಕ್ಕೆ ರುದ್ರಾಕ್ಷ ಮಾಲೆಯನ್ನು ಉಪಯೋಗಿಸಿ. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ. ಮಂತ್ರ - ಓಂ ಹಂ ಹನುಮಂತಯೇನಮಃ
3. ರೋಗಗಳಿಂದ ಮುಕ್ತಿಪಡೆಯಲು - ಕೆಲ ಜನರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತದೆ. ಹೀಗಿರುವಾಗ ಹನುಮ ಜಯಂತಿಯ ದಿನ ಈ ಕೆಳಗೆ ನೀಡಲಾಗಿರುವ ಚೌಪಾಯಿಯನ್ನು ಪಠಿಸಿ. ಇದಲ್ಲದೆ ನಿಯಮಿತವಾಗಿ ಈ ಚೌಪಾಯಿಯನ್ನು ಪಠಿಸುವವರ ಮೇಲೆ ಹನುಮನ ವಿಶೇಷ ಕೃಪೆ ಇರುತ್ತದೆ. ಚೌಪಾಯಿ - 'ನಾಸೌ ರೋಗ ಹರೈ ಸಬ್ ಪೀರಾ, ಜಪತ್ ನಿರಂತರ ಹನುಮತ ಬೀರಾ'
4. ಇಷ್ಟಾರ್ಥ ಸಿದ್ಧಿಗಾಗಿ ಈ ಕೆಲಸ ಮಾಡಿ - ಯಾವುದೇ ಒಂದು ವಿಶಿಷ್ಟ ಮನೋಕಾಮನೆ ಪೂರ್ತಿಗಾಗಿ ಹನುಮಾನ ಜಯಂತಿಯ ದಿನ 'ಓಂ ಮಹಾಬಲಾಯ ವಿರಾಯ ಚೀರಂಜೀವಿನ ಉದ್ದತೆ, ಹರಿಣೆ ವಜ್ರ ದೇಹಾಯ ಚೋಲಾಂಗ್ಧಿತ್ ಮಹಾವ್ಯಯೇ' ಈ ಮಂತ್ರವನ್ನು 108 ಬಾರಿ ಜಪಿಸಿ.
5. ವಿದ್ಯೆ ಹಾಗೂ ಜ್ಞಾನ ಪ್ರಾಪ್ತಿಗಾಗಿ ಈ ಕೆಲಸ ಮಾಡಿ -ವಿದ್ಯಾರ್ಥಿಗಳು ಶ್ರೀ ಆಂಜನೇಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಹನುಮಾನ ಜಯಂತಿಯ ದಿನ ಹನುಮಾನ್ ಚಾಲಿಸಾ ಪಠಿಸಬೇಕು. ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಹಾಗೂ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಮಂತ್ರ - ವಿದ್ಯಾವಾನ ಗುಣಿ ಅತಿ ಚತುರ ರಾಮ ಕಾಜ ಕರಿಬೇಕೋ ಆತುರ'