Birthday Special: ಪತ್ರಕರ್ತೆಯಾಗ ಬಯಸಿದ್ದ ಈ ಖ್ಯಾತ ಬಾಲಿವುಡ್ ನಟಿಯ ಜೀವನ ಬದಲಾಯಿಸಿದ್ದು ಬ್ಯೂಟಿ ಕಾಂಟೆಸ್ಟ್
ಜಾಕ್ವೇಲಿನ್ ಶ್ರೀಲಂಕಾ ಮೂಲದ ನಟಿ ಹಾಗೂ ಮಾಡೆಲ್ ಆಗಿದ್ದಾರೆ. 2006 ರಲ್ಲಿ ಮಿಸ್ ಯುನಿವರ್ಸ್ ಶ್ರೀಲಂಕಾ ಪಿಜೆಂಟ್ ಪ್ರಶಸ್ತಿಯನ್ನು ಜಾಕ್ವೇಲಿನ್ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಜಾಕ್ವೇಲಿನ್ ಒಂದು ಮಲ್ಟಿ ಎಥನಿಕ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಜನಿಸಿದ್ದು ಬಹರೇನ್ ನಲ್ಲಿ. ಅವರ ತಂದೆ ಶ್ರೀಲಂಕಾ ಮೂಲದವರಾಗಿದ್ದರೆ, ಅವರ ತಾಯಿ ಮಲೇಷಿಯಾ ಮೂಲದವರಾಗಿದ್ದಾರೆ.
1980ರಲ್ಲಿ ಭುಗಿಲೆದ್ದ ತಮಿಳ್ ಹಾಗೂ ಸಿಂಹಳಿಯರ ವಿವಾದದ ಹಿನ್ನೆಲೆ ಜಾಕ್ವೇಲಿನ್ ಅವರ ತಂದೆ ಬಹರೇನ್ ಗೆ ಹೋಗಿದ್ದರು ಅಲ್ಲಿಅವರು ಏರ್ ಹೋಸ್ಟೆಸ್ ಆಗಿದ್ದ ಜಾಕ್ವೇಲಿನ್ ಅವರ ತಾಯಿಯನ್ನು ಭೇಟಿಯಾಗಿದ್ದರು.
ಬಹರೇನ್ ನಲ್ಲಿಯೇ ಜಾಕ್ವೇಲಿನ್ ಬೆಳೆದಿದ್ದಾರೆ. ಅವರ ಆರಂಭಿಕ ಶಿಕ್ಷಣ ಕೂಡ ಅಲ್ಲಿಯೇ ನಡೆದಿದೆ. ಆಸ್ಟ್ರೇಲಿಯಾದ ಸಿಡ್ನಿ ವಿವಿಯಿಂದ ಅವರು ಮಾಸ್ ಕಮ್ಯುನಿಕೇಷನ್ ಅಧ್ಯಯನ ನಡೆಸಿದ್ದಾರೆ. ಚಿತ್ರೋದ್ಯಮಕ್ಕೆ ಬರುವುದಕ್ಕೂ ಮುನ್ನ ಜಾಕ್ವೇಲಿನ್ ಓರ್ವ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾಳೆ.
ಹಲವು ಭಾಷೆಗಳ ಮೇಲೆ ಜಾಕ್ವೇಲಿನ್ ಉತ್ತಮ ಪ್ರಭುತ್ವ ಹೊಂದಿದ್ದಾರೆ. ಬರಲ್ಟೀಜ್ ಸ್ಕೂಲ್ ಆಫ್ ಲ್ಯಾಂಗ್ವೇಜ್ ನಲ್ಲಿ ಅವರು ಸ್ಯಾನಿಶ್, ಫ್ರೆಂಚ್ ಹಾಗೂ ಅರೇಬಿಕ್ ಅಧ್ಯಯನ ನಡೆಸಿದ್ದಾರೆ.
ಫೂಡಿ ಆಗಿರುವ ಜಾಕ್ವೇಲಿನ್ ಗೆ ಅಡುಗೆ ತಯಾರಿಸುವುದು ತುಂಬಾ ಇಷ್ಟದ ಕೆಲಸ. ಜಾಕ್ವೇಲಿನ್ ಗೆ ಫ್ರೆಂಚ್ ಆಹಾರ ತುಂಬಾ ಇಷ್ಟ. ಆದರೆ, ಶ್ರೀಲಂಕಾ ನಿವಾಸಿಯಾಗಿರುವ ಕಾರಣ ಅವರ ಡಯಟ್ ಪ್ಲಾನ್ ನಲ್ಲಿ ಮೀನು ಮಹತ್ವದ ಪಾತ್ರವಹಿಸುತ್ತದೆ.
ಜಪಾನಿ ಶೆಫ್ ಆಗಿರುವ ದರ್ಶನ್ ಜೊತೆಗೆ ಸೇರಿ ಜಾಕ್ವೇಲಿನ್ ಶ್ರೀಲಂಕಾದಲ್ಲಿ ರೆಸ್ಟೋರೆಂಟ್ ವೊಂದನ್ನು ಕೂಡ ನಡೆಸುತ್ತಾಳೆ ಹಾಗೂ ಅದಕ್ಕೆ 'ಕಾಮಸೂತ್ರ' ಎಂದು ಹೆಸರಿಟ್ಟಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ಜಾಕ್ವೇಲಿನ್ ಅವರ ಸಹೋದರಿಯ ರೆಸಿಪಿ ಬುಕ್ ನಲ್ಲಿರುವ ಆಹಾರಗಳನ್ನು ತಯಾರಿಸಲಾಗುತ್ತದೆ.
ಬೆಹರೆನ್ ರಾಜಕುಮಾರ ಪ್ರಿನ್ಸ್ ಬಿನ್ ರಶೀದ್ ಅಲ್ ಖಲಿಫಾ ಜಾಕ್ವೇಲಿನ್ ಮೊದಲ ಬಾಯ್ ಫ್ರೆಂಡ್. ಬ್ರೇಕ್ ಅಪ್ ಬಳಿಕ ಪ್ರಿನ್ಸ್ 'ಜಾಕಿ' ಹೆಸರಿನ ಅಲ್ಬಮ್ ಕೂಡ ಬಿಡುಗಡೆ ಮಾಡಿದ್ದ.
ಜಾಕ್ವೇಲಿನ್ ಸಲ್ಮಾನ್ ಖಾನ್ ನ ಹತ್ತಿರದ ಸ್ನೇಹಿತೆಯಾಗಿದ್ದಾಳೆ. ಬಾಂದ್ರಾದಲ್ಲಿರುವ ಒಂದು 3 BHK ಅಪಾರ್ಟ್ಮೆಂಟ್ ಅನ್ನು ಸಲ್ಮಾನ್ ಖಾನ್ ಜಾಕ್ವೇಲಿನ್ ಗಾಗಿ ಪ್ರೋತ್ಸಾಹಕ ಟೋಕನ್ ರೂಪದಲ್ಲಿ ನೀಡಿದ್ದ ಎಂದೂ ಕೂಡ ಹೇಳಲಾಗುತ್ತದೆ. ಆದರೆ, ಬಳಿಕ ಜಾಕ್ವೇಲಿನ್ ಈ ಕುರಿತಾದ ವರದಿಗಳನ್ನು ತಿರಸ್ಕರಿಸಿದ್ದಳು.