ಕೆ.ಎಲ್.ರಾಹುಲ್‌ಗೆ ಹುಟ್ಟುಹಬ್ಬದ ಸಂಭ್ರಮ.. ಅವರ ಕ್ಯೂಟ್‌ ಲವ್‌ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು!

Mon, 18 Apr 2022-1:54 pm,

ಲಕ್ನೋ ಸೂಪರ್ ಜೈಂಟ್ಸ್  ನಾಯಕ ಕೆ.ಎಲ್ ರಾಹುಲ್ ಬಾಲಿವುಡ್ ತಾರೆ ಅಥಿಯಾ ಶೆಟ್ಟಿ ಅವರೊಂದಿಗೆ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. 

ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ಇಂದು (ಏಪ್ರಿಲ್ 18) 30 ನೇ ವರ್ಷಕ್ಕೆ ಕಾಲಿಟ್ಟರು. ರಾಹುಲ್ ತಮ್ಮ 100ನೇ IPL ಪಂದ್ಯದಲ್ಲಿ ತಮ್ಮ ಮೂರನೇ IPL ಶತಕವನ್ನು ಸಿಡಿಸಿದರು. ಇದೀಗ ಸಂಜು ಸ್ಯಾಮ್ಸನ್ ಅವರೊಂದಿಗೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದು ಶತಕಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ಪ್ರೇಮ ಕಹಾನಿ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. 

ಕೆ.ಎಲ್ ರಾಹುಲ್ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ತೆರಳಿದಾಗ, ಗೆಳತಿ ಅಥಿಯಾ ಶೆಟ್ಟಿ ಟೀಂ ಇಂಡಿಯಾ ಉಪನಾಯಕನ ಜೊತೆಗೆ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಆ ಬಳಿಕ ಇವರ ಪ್ರೀತಿಯ ಬಗ್ಗೆ ಗಾಸಿಪ್‌ ಶುರುವಾದವು. 

ಕಳೆದ ವರ್ಷ ಅಥಿಯಾ ಶೆಟ್ಟಿ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ರಾಹುಲ್ ಅಂತಿಮವಾಗಿ ತಮ್ಮ ಸಂಬಂಧವನ್ನು Instagram ಅಧಿಕೃತಗೊಳಿಸಿದರು. ಕೆ.ಎಲ್ ರಾಹುಲ್ ಸಾಮಾಜಿಕ ಮಾಧ್ಯಮದಲ್ಲಿ ಚಿಕ್ಕದಾದ ಆದರೆ ರೋಮ್ಯಾಂಟಿಕ್ ಶೀರ್ಷಿಕೆಯೊಂದಿಗೆ ಇಬ್ಬರ ಫೋಟೋಗಳನ್ನು ಹಂಚಿಕೊಂಡರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link