ಮರೆಯಲಾಗದ ನೆನಪು ಅಪ್ಪು: ಕನ್ನಡ ಕಂದ ದಿವಂಗತ ಪುನೀತ್‌ ರಾಜ್‌ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ!!

Sun, 17 Mar 2024-8:44 am,

ನಟ ಪುನೀತ್​ ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮನಗಲಿ ಮೂರು ವರ್ಷಗಳು ಕಳೆದಿವೆ.. ಆದರೆ ಆ ಕನ್ನಡದ ಕಂದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ..   

ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ ಅತ್ಯುತ್ತಮ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಸ್ಸಿನಲ್ಲಿ ಉಳಿದುಕೊಂಡವರು ಪುನೀತ್‌ರಾಜಕುಮಾರ್.  

ತಮ್ಮದೇ ಪ್ರೊಡಕ್ಷನ್ ಹೌಸ್‌ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಎಷ್ಟೋ ಜನರ ಜೀವನಕ್ಕೆ ದಾರಿ ದೀಪವಾಗಿದ್ದಾರೆ ನಮ್ಮ ಅಪ್ಪು..  

ನಟನೆಯೊಂದಿಗೆ ಅನೇಕ ಕಾರ್ಯಕ್ರಮಗಳ ನಿರೂಪಣೆ, ಗಾಯಕನಾಗಿ ಅಪ್ಪು ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು..   

ಕನ್ನಡಿಗರ ಎದೆಯಲ್ಲಿ ಎಂದೆಂದಿಗೂ ಜೀವಂತವಾಗಿರುವ ಅಪ್ಪು, ದೊಡ್ಮನೆ ರಾಜಕುಮಾರ ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ.   

ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಎಷ್ಟೋ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ.. ಬದುಕಿದರೆ ಅಪ್ಪು ಅವರಂತೆ ಬದುಕುಬೇಕು ಎನ್ನುತ್ತಾರೆ ಕನ್ನಡಿಗರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link