Happy friendship day: ನೋವು ನಲಿವಿನಲ್ಲಿ ಸದಾ ಜೊತೆಗಿರುವ ನಿಮ್ಮ ಗೆಳೆಯನಿಗೆ ಕಳಿಸಿ ಸ್ಪೆಷಲ್ ವಿಶ್.. ಇಲ್ಲಿವೆ ನೋಡಿ ಫ್ರೆಂಡ್‌ಶಿಪ್ ಡೇ ಮೆಸೇಜ್ ಐಡಿಯಾಸ್!
ನಗುವುದು ಸಹ ಕಷ್ಟವಾದಾಗ ನೀನು ನನ್ನನ್ನ ನಗಿಸಿದೆ ಅಳುವೇ ಜೀವನವಾದಾಗ ನೀ ನನ್ನ ಕಣ್ಣೊರಿಸಿದೆ ಸದಾ ನನ್ನ ಜೊತೆ ನಿಂತಿದ್ದಕ್ಕಾಗಿ ನಾನೆಂದಿಗೂ ನಿನಗೆ ಋಣಿಯಾಗಿರುತ್ತೇನೆ. ಎಲ್ಲಾ ಜನ್ಮದಲ್ಲಿಯೂ ನನಗೆ ಸ್ನೇಹಿತನಾಗಿ ನೀನೇ ಬೇಕು. ಹ್ಯಾಪಿ ಫ್ರೆಂಡ್‌ಶಿಪ್ ಡೇ
ದೇವರು ನನಗಾಗಿ ಒಂದು ಜೀವಿಯನ್ನು ಸೃಷ್ಟಿಸಿದ್ದಾನೆ. ಆ ಜೀವಿ ನಗುತ್ತದೆ.. ಅಳುತ್ತದೆ.. ನನ್ನ ಕಷ್ಟಕ್ಕೆ ಕಣ್ಣೀರು ಹಾಕುತ್ತದೆ.. ಆ ಜೀವಿ ಬೇರೆ ಯಾರೂ ಅಲ್ಲ ನೀನೇ.. ನೀನು ನನ್ನ ಗೆಳೆಯ! ಸ್ನೇಹಿತರ ದಿನದ ಶುಭಾಶಯಗಳು
ಸ್ನೇಹ ಎಂಬುದು ಎರಡು ಹೃದಯಗಳ ನಡುವೆ ಮೂಡುವ ಒಂದು ಅದ್ಭುತವಾದ ಸಂಬಂಧ..ಸಾವಿರಾರು ಹೃದಯಗಳ ನಡುವೆ ಒಂದಾದ ನಮ್ಮಿಬ್ಬರ ಸಂಗಮವನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ, ನಿನ್ನ ನೋವು-ನಲಿವು, ಸುಖ-ದುಖಃ ಎಲ್ಲದರಲ್ಲೂ ನಾನು ನಿನ್ನ ಜೊತೆಯಾಗಿ ನಿಲ್ಲುತ್ತೇನೆ...ಸ್ನೇಹಿತರ ದಿನದ ಶುಭಾಶಯಗಳು
ನನ್ನನ್ನು ಅರಿತುಕೊಂಡು ಸದಾ ನನ್ನ ಯೋಚನೆಗಳಿಗೆ ಸಾತ್ ನೀಡುವ ನಿನಗೆ ನಾನೆಂದು ಚಿರಋಣಿ. ಹ್ಯಾಪಿ ಫ್ರೆಂಡ್‌ಶಿಪ್ ಡೇ...
ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಮಾತ್ರವಲ್ಲ ನೋವಿನ ಸಮಯದಲ್ಲಿಯೂ ನನ್ನ ಬೆನ್ನೆಲುಬಾಗಿ ನಿಂತಿದ್ದಕ್ಕಗಿ ಧನ್ಯವಾದ. ಸ್ನೇಹಿತರ ದಿನದ ಶುಭಾಶಯಗಳು ನನ್ನ ಸ್ನೇಹಿತ