ಸ್ವಾತಂತ್ರ್ಯ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳಿಸಲು ಇಲ್ಲಿವೆ ಶುಭ ಸಂದೇಶಗಳು... ದೇಶದ ಹಬ್ಬವನ್ನು ಸಂಭ್ರಮಿಸೋಣ!
1858 ರಿಂದ 1947 ರವರೆಗೆ ಬ್ರಿಟಿಷರು ನಮ್ಮನ್ನು ಆಳಿದರು.
ಕೋಟ್ಯಾಂತರ ದೇಶಪ್ರೇಮಿಗಳ ಬಲಿದಾನದ ಬಳಿಕ 15 ಆಗಸ್ಟ್ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಕಿತು.
ಸಿಪಾಯಿ ದಂಗೆ ಅಥವಾ 1857 ರ ಭಾರತೀಯ ಬಂಡಾಯವು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಹೋರಾಟದ ಹಾದಿಗೆ ಭದ್ರ ಬುನಾದಿಯಾಯಿತು.
ಮಹಾತ್ಮ ಗಾಂಧೀಜಿ ಶಾಂತಿ ಮಂತ್ರದಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಕಿತ್ತೂರಿನ ರಾಣಿ ಚನ್ನಮ್ಮ ಹೀಗೆ ಕೋಟ್ಯಾಂತರ ದೇಶ ಭಕ್ತರ ಬಲಿದಾನದ ಫಲವೇ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ.
ಇಂದು ದೇಶದ 78ನೇ ಸ್ವಾತಂತ್ರೋತ್ಸವವನ್ನು ಭಾರತದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಈ ದಿನವನ್ನು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ.