ಪ್ರತಿಯೊಬ್ಬ ಗಂಡ ತನ್ನ ಹೆಂಡತಿಗೆ ಹೇಳಬೇಕಾದ ಸುಳ್ಳುಗಳು..! ಈ ಸುಳ್ಳುಗಳೇ ಸುಖ ಸಂಸಾರದ ಗುಟ್ಟು..
ಯಾವುದೇ ಸಂಬಂಧದಲ್ಲಿ ಪ್ರಾಮಾಣಿಕವಾಗಿರುವುದು ಅತ್ಯಗತ್ಯ. ನಿಮ್ಮ ಪ್ರಾಮಾಣಿಕತೆ ನಿಮ್ಮ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುತ್ತದೆ. ಆದರೆ ನಿಮ್ಮ ಹೆಂಡತಿಗೆ ಸುಳ್ಳು ಹೇಳುವುದು ತಪ್ಪು ಎಂದು ಹಲವರು ಹೇಳುತ್ತಾರೆ. ಆದರೆ ಕೆಲವು ಸುಳ್ಳುಗಳನ್ನು ನೀವು ಹೇಳಲೇಬೇಕು..
ಈ ಸುಳ್ಳುಗಳು ಪತಿ-ಪತ್ನಿಯರ ನಡುವೆ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತವೆ. ಇವು ನಿಮ್ಮ ಹೆಂಡತಿಯ ಭಾವನೆಗಳಿಗೆ ಯಾವುದೇ ಧಕ್ಕೆ ತರುವುದಿಲ್ಲ. ಅಲ್ಲದೆ ಇವುಗಳು ನಿಮ್ಮ ಹೆಂಡತಿಯರ ಒತ್ತಡವನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಚನ್ನಾಗಿಲ್ಲ ಅಂದ್ರೂ ನಿಮ್ಮ ಹೆಂಡತಿಯನ್ನು ಹೊಗಳುವುದರಲ್ಲಿ ತಪ್ಪೇನಿಲ್ಲ. ಆದ್ದರಿಂದ ನಿಮಗೆ ಸಾಧ್ಯವಾದಾಗಲೆಲ್ಲಾ ನೀನು ಸುಂದರವಾಗಿದ್ದೀಯಾ ಅಂತ ಹೇಳಿ. ಇದು ನಿಮ್ಮ ಹೆಂಡತಿಯ ದಣಿದ ಮುಖದಲ್ಲಿ ನಗು ಮತ್ತು ನಾಚಿಕೆಯನ್ನು ತರುತ್ತದೆ. ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ ಮಹಿಳೆಯರು ತುಂಬಾ ಸುಸ್ತಾಗಿರುತ್ತಾರೆ. ಆದ್ದರಿಂದ ನಿಮ್ಮ ಹೆಂಡತಿಯ ಅಂದವನ್ನು ಹೊಗಳಿ..
ಮಹಿಳೆಯರು ತಮ್ಮ ಪತಿಗಾಗಿ ವಿವಿಧ ಭಕ್ಷ್ಯಗಳನ್ನು ಪ್ರೀತಿಯಿಂದ ಮಾಡುತ್ತಾರೆ. ಅಲ್ಲದೆ ಅವರಿಗೆ ಗೊತ್ತಿರುವ ಪಾಕವಿಧಾನವನ್ನು ಪ್ರಯತ್ನಿಸುತ್ತಾರೆ. ಅದನ್ನು ನಿಮಗೆ ಬಡಿಸುತ್ತಾರೆ. ಕೆಲವೊಮ್ಮೆ ರುಚಿಯಾಗಿರಬಹುದು.. ಇನ್ನೂ ಕೆಲವೊಮ್ಮೆ ರುಚಿಯಾಗಿಲ್ಲದಿರಬಹುದು.. ಆದ್ರೆ ಚನ್ನಾಗಿಲ್ಲ ಅಂದ್ರೂ ತುಂಬಾ ಚನ್ನಾಗಿದೆ ಅಂತ ಸುಳ್ಳು ಹೇಳಿ ನೋಡಿ.. ದಣಿದ ಆ ಸುಂದರ ಮುಖದಲ್ಲಿ ಮುಗುಳು ನಗು ಬರುತ್ತದೆ..
ನೀವು ಕಚೇರಿಯಿಂದ ಮನೆಗೆ ಬಂದಾಗ ದಣಿವಾಗಿದೆ ಅಂತ ನೇರವಾಗಿ ಹೆಂಡತಿ ಮುಖಕ್ಕೆ ಹೊಡೆದಂತೆ ಹೇಳಬೇಡಿ.. ಅವಳೊಂದಿಗೆ ಸ್ವಲ್ಪ ಮಾತನಾಡುವುದು ಒಳ್ಳೆಯದು.. ಆದರೆ ಅನೇಕರು ದಣಿದ ತಕ್ಷಣ ಊಟ ಮಾಡಿ ಮಲಗುತ್ತಾರೆ. ಇದರಿಂದ ನಿಮ್ಮ ಹೆಂಡತಿಗೆ ತುಂಬಾ ದುಃಖವಾಗುತ್ತದೆ. ಅವಳೊಂದಿಗೆ ಮಾತನಾಡಲು ಸಮಯ ಮಾಡಿಕೊಳ್ಳಿ.
ಸಣ್ಣ ಸುಳ್ಳುಗಳು ಸಂಬಂಧವನ್ನು ಹಾಳು ಮಾಡುವುದಿಲ್ಲ. ಆದರೆ ಗಂಭೀರ ವಿಷಯಗಳಲ್ಲಿ ಸುಳ್ಳು ಹೇಳಬಾರದು. ನೀವು ಯಾವಾಗಲೂ ಸುಳ್ಳು ಹೇಳುವುದರಿಂದ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ. ಸತ್ಯವನ್ನು ಹೇಳಿದರೂ ಅವರು ನಂಬುವುದಿಲ್ಲ. ನಂಬಿಕೆ ದ್ರೋಹ ಮಾಡುವ ಕನಸು ಕೂಡ ಬೇಡ. ಇದು ನಿಮ್ಮ ಸಂಬಂಧವನ್ನು ಮುರಿಯುತ್ತದೆ.