Har Ghar Tiranga : ಸಿಎಂ ಬೊಮ್ಮಾಯಿ ಚಾಲನೆ ನೀಡಿದ `ಹರ್ ಘರ್ ತಿರಂಗಾ` : ಫೋಟೋಗಳು
ಅಭಿಯಾನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸಬೇಕು. ಸಂಕುಚಿತ , ಸ್ವಾರ್ಥ ಮನೋಭಾವನೆಯನ್ನು ತೊರೆದು, ದೇಶಕ್ಕಾಗಿ ನಿಲ್ಲುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಯುವಜನತೆಗೆ ಕರೆ ನೀಡಿದರು.
ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ :ಯುವಕರು ಭಾರತದ ಮುಂದಿನ ಭವಿಷ್ಯವನ್ನು ನಿರ್ಮಿಸುವ ಭಾಗ್ಯಶಾಲಿಗಳು. 75 ವರ್ಷ ವ್ಯಕ್ತಿ ಗಾದರೆ ದೊಡ್ಡ ವಯಸ್ಸು. ಅದೇ ದೇಶಕ್ಕಾದರೆ ನವ ತರುಣನ ವಯಸ್ಸು. ಯುವಕರಿಗೆ ಸೇರಿರುವ ಯುವ ದೇಶ ಭವ್ಯ ಭವಿಷ್ಯವಿರುವ ದೇಶ ನಮ್ಮದು. 46 % ಯುವಶಕ್ತಿ ಇರುವ ದೇಶ ಭಾರತ.
ಸರ್ಕಾರದ ವತಿಯಿಂದ 1 ಕೋಟಿ 8 ಲಕ್ಷ ಧ್ವಜಗಳನ್ನು ನೀಡಿದ್ದೇವೆ. ಜನ ಸ್ವಪ್ರೇರಣೆಯಿಂದ ಧ್ವಜ ಕೊಂಡಿದ್ದಾರೆ. 25 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿವೆ. ಪ್ರತಿ ಗ್ರಾಮ, ಮನೆಯಲ್ಲಿ ಧ್ವಜ ಹಾರಾಡುತ್ತಿದೆ. ತ್ರಿವರ್ಣ ದ ಶಕ್ತಿ ಎಲ್ಲರನ್ನು ಒಗ್ಗೂಡಿ ಸುವ ಶಕ್ತಿ ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ :ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವರ ಹೋರಾಟ, ತ್ಯಾಗ, ಬಲಿದಾನದಿಂದ ಬಂದಿವೆ. ಸಾವಿರಾರು ಜನ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಎಲ್ಲರ ಹಕ್ಕು. ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ. ಯಾರದ್ದೇ ಸ್ವತ್ತಲ್ಲ. ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಎಲ್ಲರೂ ಸೇರಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ.
ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದು ಕನ್ನಡ ನಾಡಿನ ಹೆಮ್ಮೆಯ ರಾಣಿ ಕಿತ್ತೂ ರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಕ್ಕಾಗಿ ಪ್ರಾಣ ಕೊಟ್ಟವರು ರಾಜ್ಯದಲ್ಲಿ ಇದ್ದಾರೆ. ಮೈಲಾರ.ಮಹಾದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಸಾಹುಕಾರ ಚೆನ್ನಯ್ಯ, ಇವರನ್ನು ನೆನಪಿಡಬೇಕು. ಇತಿಹಾಸದಲ್ಲಿದ್ದವರು ಭಾರತದ ಭವಿಷ್ಯ ಬರೆದಿದ್ದಾರೆ ಎಂದರು.
ಭಾರತವನ್ನು ಶ್ರೇಷ್ಟವಾಗಿಸುವ ಜವಾಬ್ದಾರಿ ಯುವಕರ ಮೇಲಿದೆ :ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ದೇಶವನ್ನು ದಕ್ಷತೆಯಿಂದ ನಡೆಸುತ್ತಿದ್ದಾರೆ. ಧೀಮಂತ ನಾಯಕ ರಾದ ಅವರು ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಎಂದು ಕರೆ ಕೊಟ್ಟಿದ್ದಾರೆ. ರೈತರು, ವಿದ್ಯಾರ್ಥಿಗಳು, ಬಡವರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನುಹಮ್ಮಿಕೊಂಡು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್,ಸಬ್ ಕಾ ಪ್ರಯಾಸ್’ ಎಂಬುದು ಅವರ ಪ್ರಧಾನಮಂತ್ರಿಯವರ ಮೂಲಮಂತ್ರ.