ನತಾಶಾ ಜೊತೆ ಡಿವೋರ್ಸ್ ಬೆನ್ನಲ್ಲೇ ಖ್ಯಾತ ನಟಿಯೊಂದಿಗೆ ಹಾರ್ದಿಕ್ ಸುತ್ತಾಟ! ವಿಚ್ಛೇದನಕ್ಕೆ ಕಾರಣವಾಗಿದ್ದು ಇದೇನಾ?
ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದು ಎಲ್ಲೆಡೆ ಸದ್ದು ಮಾಡಿತ್ತು. ಅಂಬಾನಿ ಪುತ್ರನ ವಿವಾಹದಲ್ಲಿ ಇಬ್ಬರು ಒಟ್ಟಾಗಿ ಕುಣಿದಾಡಿದ್ದು, ಸಖತ್ ವೈರಲ್ ಕೂಡ ಆಗಿತ್ತು
ಇನ್ನು 2020 ರಲ್ಲಿ ವಿವಾಹವಾದ ಹಾರ್ದಿಕ್ ಮತ್ತು ನತಾಶಾ, ಕೆಲ ದಿನಗಳ ಹಿಂದೆ ಚ ಪಡೆಯುವ ಬಗ್ಗೆ ಖಚಿತ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಆದರೆ ಈ ಸುದ್ದಿ ಬಿತ್ತರವಾದ ಬೆನ್ನಲ್ಲೇ, ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವೀಡಿಯೋದಲ್ಲಿ ಹಾರ್ದಿಕ್ ಮತ್ತು ಅನನ್ಯಾ ಹುರುಪಿನಿಂದ ಕುಣಿದಾಡುತ್ತಿರುವುದು ಕಾಣಬಹುದು. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ಕಂಡುಬಂದಿದ್ದು, ಎಲ್ಲರಿಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದರು.
ಈ ವಿಡಿಯೋ ಕಂಡ ಅನೇಕರು ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು, ಇಬ್ಬರೂ ಸಹ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದೀಗ ಒಟ್ಟಾಗಿ ಸಂತೋಷದಿಂದ ಕುಣಿದಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ 2022 ರಲ್ಲಿ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಅನನ್ಯಾ ಪಾಂಡೆ ಬ್ರೇಕಪ್ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.
"ಪಾಂಡ್ಯ ನೋವನ್ನು ಅನನ್ಯಾ ಮರೆಮಾಡುತ್ತಾಳೆ... ನೀವಿಬ್ಬರು ಮದುವೆಯಾಗಿ" ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಹೇಳಿದ್ರೆ, ಇನ್ನೊಬ್ಬರು "ಪ್ರಾಮಾಣಿಕವಾಗಿ ಹೇಳುವುದಾದರೆ ಇವರಿಬ್ಬರು ಒಟ್ಟಿಗೆ ಅದ್ಭುತವಾಗಿ ಕಾಣುತ್ತಾರೆ" ಎಂದು ಹೇಳುತ್ತಿದ್ದಾರೆ.
ಹಾರ್ದಿಕ್ ಮತ್ತು ನತಾಶಾ ಡಿವೋರ್ಸ್ ದೃಢಪಟ್ಟಿದೆ. ಈ ಬೆನ್ನಲ್ಲೇ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಭುಗಿಲೆದ್ದಿದೆ. ಒಟ್ಟಾರೆ ಈ ಎಲ್ಲದಕ್ಕೂ ಸ್ಪಷ್ಟನೆ ಸಿಗಬೇಕೆಂದರೆ ಅನನ್ಯ ಅಥವಾ ಹಾರ್ದಿಕ್, ಇಬ್ಬರಲ್ಲಿ ಒಬ್ಬರು ಹೇಳಿಕೆ ನೀಡಬೇಕಿದೆ.