Hardik Pandya-Natasa Stankovic: ಮಗನ ಮುಂದೆ ಮತ್ತೆ ಮದುವೆಯಾದ ಹಾರ್ದಿಕ್-ನತಾಶ: ಮುದ್ದು ಜೋಡಿಯ ಮದುವೆ ಫೋಟೋ ನೋಡಿ

Tue, 14 Feb 2023-11:13 pm,

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಇಂದು ಉದಯಪುರದ ಜೈಸಮಂದ್ ರೆಸಾರ್ಟ್ ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರನ ಕಡೆಯವರು ಗಾಢ ನೀಲಿ ಬಣ್ಣದ ಸೂಟ್‌ಗಳನ್ನು ಧರಿಸಿದ್ದರೆ, ವಧುವಿನ ಕಡೆಯವರು ಮಸುಕಾದ ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದರು.

ದಿ ವೆಡ್ಡಿಂಗ್ ಸ್ಟೋರಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನತಾಶಾ ಸ್ಟಾಂಕೋವಿಕ್ ತುಂಬಾ ಸೊಗಸಾಗಿ ಕಾಣುತ್ತಿದ್ದರು. ರಾಜಸ್ಥಾನದ ಪ್ರಣಯ ನಗರವಾದ ಉದಯಪುರದಲ್ಲಿ ಈ ಬೆಡಗಿ ತನ್ನ ಅಂದದಿಂದಲೇ ಎಲ್ಲರ ಗಮನಸೆಳೆದಿದ್ದಾರೆ.

ನಟಿಯ ಕುಟುಂಬವು ಸರ್ಬಿಯಾದ ಪೊಜಾವೆರಾಕ್‌ನಿಂದ ಆಗಮಿಸಿದೆ. ನತಾಶ ತಮ್ಮ ತಂದೆಯ ಜೊತೆ ಹೆಜ್ಜೆ ಹಾಕುವುದನ್ನು ಕಾಣಬಹುದು.  

ಹಾರ್ದಿಕ್ ಪಾಂಡ್ಯ ತನ್ನ ಪತ್ನಿ ನತಾಶಾ ಸ್ಟಾಂಕೋವಿಕ್ ರಿಗೆ ಮುತ್ತಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.  

ಇದೇ ವೇಳೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅವರ ಮಗ ಅಗಸ್ತ್ಯ ಕೂಡ ಮುದ್ದಾಗಿ ಕಾಣಿಸಿಕೊಂಡಿದ್ದು, ಅಮ್ಮನನ್ನು ಚುಂಬಿಸುವ ಈ ಚಿತ್ರವು ತುಂಬಾ ಮುದ್ದಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಈ ಜೋಡಿ ರಿಜಿಸ್ಟರ್ ವಿವಾಹವಾಗಿದ್ದರು. ಅಗಸ್ತ್ಯ 2020 ರಲ್ಲಿ ಜನಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link