ವಿಸ್ವಕಪ್ ಗೆದ್ದು ಮನೆಗೆ ಮರಳಿದ ಪಾಂಡ್ಯ..! ಮಗನನ್ನು ಬಿಗಿದಪ್ಪಿ ಭಾವುರಾದ ಹಾರ್ದಿಕ್..?
Hardik Pandya: ಟಿ20 ವಿಶ್ವಕಪ್ ಗೆದ್ದು ಹಾರ್ದಿಕ್ ಪಾಂಡ್ಯ ತವರಿಗೆ ಮರಳಿದ್ದಾರೆ. ಟಿ20 ವಿಶ್ವಕಪ್ 2024 ಬರ್ಬಾಡೋಸ್‌ನಲ್ಲಿ ನಡೆದ ಕಾರಣ ಹಾರ್ದಿಕ್ ಹೆಂಡತಿ ಮಗುವನ್ನು ಬಿಟ್ಟು ಟೀಂ ಇಂಡಿಯಾದ ಜೊತೆಗೆ ಒಬ್ಬರೇ ಬರ್ಬಾಡೋಸ್‌ಗೆ ಹಾರಿದ್ದರು. ವಿಶ್ವಕಪ್ ಗೆದ್ದು ಮೋದಿಯ ಭೇಟಿ ನಂತರ, ಹಾರ್ದಿಕ್ ವಾಂಖಡೆ ಸ್ಟೇಡಿಯಂನಲ್ಲಿ ಆಯಾಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಂತರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪೂರ್ವ ವಿವಾಹ ಸಮಾರಂಭದಲ್ಲಿ ಹಾರ್ದಿಕ್, ಸೂರ್ಯಕುಮಾರ್ ಯಾದವ್ ಹಾಗೂ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಸನ್ಮಾನಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಹಾರ್ದಿಕ್ ಪಾಂಡ್ಯ ಇದೀಗ ಮನೆಗೆ ಹಿಂದಿರುಗಿದ್ದಾರೆ. ವಿಸ್ವಕಪ್ ಗೆದ್ದು ಮನೆಗೆ ಮರಳಿದ ಹಾರ್ದಿಕ್ ಮಗನನ್ನು ಬಿಗಿದಪ್ಪಿ ಭಾವುಕರಾಗಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಗೆಲುವನ್ನು ಹಾರ್ದಿಕ್ ಮಗನೊಂದಿಗೆ ಸಂಭ್ರಮಿಸಿದ್ದಾರೆ. ಮಗನನ್ನು ಬಿಗಿದಪ್ಪಿ ಭಾವುಕರಾಗಿದ್ದಾರೆ. ಅವರ ಮಗ ಅಗಸ್ತ್ಯ ಎಂದರೆ ಪಾಂಡ್ಯ ಅವರಿಗೆ ಎಷ್ಟು ಇಷ್ಟ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಇವರಿಬ್ಬರ ಬಂಧವನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ಇತ್ತೀಚೆಗೆ ಪಾಂಡ್ಯ ಹಾಗೂ ನತಾಶ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು ಇದೀಗ ಇದಕ್ಕೆ ಪುಷ್ಠಿ ನೀಡುವಂತೆ, ಈ ಸಂಭ್ರಮದಲ್ಲಿ ಪತ್ನಿ ನತಾಶಾ ಇಲ್ಲದಿರುವುದು ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಅಗಲಿಕೆಯ ಮಾತು ಮತ್ತೊಮ್ಮೆ ಕೇಳಿ ಬರುತ್ತಿದೆ.
ಈಗಾಗಲೇ ತಮ್ಮ ವೈಯಕ್ತಿಕ ಜೀವನದಲ್ಲಿ ಒಂದಷ್ಟು ಏರಿಳಿತಗಳನ್ನು ಅನುಭವಿಸುತ್ತಿರುವ ಪಾಂಡ್ಯ ಇತ್ತೀಚೆಗಷ್ಟೇ ತಮ್ಮ ಪುತ್ರ ಅಗಸ್ತ್ಯರೊಂದಿಗೆ ವಿಜಯೋತ್ಸವ ಆಚರಿಸಿದ್ದಾರೆ. ವಿಶ್ವಕಪ್‌ನಲ್ಲಿನ ಸಾಧನೆಗಾಗಿ ಪದಕವನ್ನು ಮಗನ ಕೊರಳಿಗೆ ಹಾಕಿ ಸಂಭ್ರಮಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಂಬಂಧಿತ ಫೋಟೋಗಳನ್ನು ಹಂಚಿಕೊಂಡಿದ್ದು 'ನನ್ನ ನಂಬರ್ ಒನ್! ನಾನು ಏನು ಮಾಡಿದರೂ ನಿನಗಾಗಿಯೇ ಮಾಡುತ್ತೇನೆ' ಎಂದು ಪಾಂಡ್ಯ ಫೋಟೋಗಳ ಕೆಳಗೆ ಬರೆದುಕೊಂಡಿದ್ದಾರೆ.