ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?
ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಚರ್ಚೆಯ ವಿಷಯವಾಗಿ ಉಳಿದಿದೆ. ಇದೀಗ ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ.
ವಿಚ್ಛೇದನ ಪಡೆದರೆ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಕೆಲವು ವರದಿಗಳು ಹೇಳಿವೆ. ಹೀಗಿರುವಾಗ ಹಾರ್ದಿಕ್ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ತಿಳಿಯೋಣ.
ಒಂದು ಕಾಲದಲ್ಲಿ 200 ರೂ.ಗೆ ಪಂದ್ಯಾವಳಿಗಳನ್ನು ಆಡಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟಿ ಮೌಲ್ಯದ ಆಸ್ತಿಯ ಒಡೆಯ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಸಂಪತ್ತು ಸುಮಾರು 91 ಕೋಟಿ ರೂ.
ಕ್ರಿಕೆಟ್ ಹೊರತಾಗಿ ಜಾಹಿರಾತುಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಇತ್ತೀಚೆಗೆ ಬಿಸಿಸಿಐ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಹಾರ್ದಿಕ್ ಗೆ ಗ್ರೇಡ್-ಎಯಲ್ಲಿ ಸ್ಥಾನ ನೀಡಲಾಗಿದ್ದು. ಈ ವರ್ಷ ಮಂಡಳಿಯಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್’ನಿಂದ ಹಾರ್ದಿಕ್ ಪಾಂಡ್ಯ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಈ ಹಿಂದೆ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಮತ್ತು ಐಪಿಎಲ್ 2023ಕ್ಕೆ ಹಾರ್ದಿಕ್’ಗೆ ತಲಾ 15 ಕೋಟಿ ರೂಪಾಯಿ ನೀಡಿತ್ತು. ಬೋಟ್, ಅಮೆಜಾನ್ ಅಲೆಕ್ಸಾ, ರಿಲಯನ್ಸ್ ರೀಟೇಲ್, ಸ್ಟಾರ್ ಸ್ಪೋರ್ಟ್ಸ್ ಮಾನ್ಸ್ಟರ್ ಎನರ್ಜಿ, ಬ್ರಿಟಾನಿಯಾ ಬೌರ್ಬನ್, ಸಿನ್ ಡೆನಿಮ್, ಗಲ್ಫ್ ಆಯಿಲ್ ಇಂಡಿಯಾ, ಡ್ರೀಮ್ 11, ಎಕ್ಸಲರೇಟ್, ಸೋಲ್ಡ್ ಸ್ಟೋರ್, ಎಸ್‌ಜಿ ಕ್ರಿಕೆಟ್ ಮತ್ತು POCO ಸೇರಿದಂತೆ ಬ್ರಾಂಡ್‌ಗಳನ್ನು ಹಾರ್ದಿಕ್ ಅನುಮೋದಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಹಾರ್ದಿಕ್ 30 ಕೋಟಿ ಮೌಲ್ಯದ ಮನೆ ಹೊಂದಿದ್ದು, ವಡೋದರಾದಲ್ಲಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ. ಆಲ್ ರೌಂಡರ್ ಕ್ರಿಕೆಟಿಗನ ಕಾರು ಸಂಗ್ರಹದ ಕುರಿತು ಮಾತನಾಡುವುದಾದರೆ, ಇದು ಆಡಿ A6, ರೇಂಜ್ ರೋವರ್ ವೋಗ್, ಜೀಪ್ ಕಂಪಾಸ್, ಮರ್ಸಿಡಿಸ್ G ವ್ಯಾಗನ್, ರೋಲ್ಸ್ ರಾಯ್ಸ್, ಲಂಬೋರ್ಘಿನಿ ಹುರಾಕನ್ EBO, ಪೋರ್ಷೆ ಕಯೆನ್ನೆ ಮತ್ತು ಟೊಯೋಟಾ ಎಟಿಯೋಸ್ ಅನ್ನು ಒಳಗೊಂಡಿದೆ.