Hardik Pandya: ಡಿವೋರ್ಸ್‌ ವದಂತಿ ಬೆನ್ನಲ್ಲೇ ಈ ಖ್ಯಾತ ನಟನ ಜೊತೆ ಸಿಕ್ಕಿಬಿದ್ದ ನತಾಶಾ.. ಹಾರ್ದಿಕ್‌ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನಾ !

Sun, 26 May 2024-7:58 am,

ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಹಾರ್ದಿಕ್ ಪಾಂಡ್ಯ ಸದ್ಯ ಸುದ್ದಿಯಲ್ಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ವದಂತಿ ಜೋರಾಗಿ ಹಬ್ಬುತ್ತಿದೆ.

2020 ರಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ಮದುವೆಯಾದರು. ಇವರಿಗೆ ಅಗಸ್ತ್ಯ ಪಾಂಡ್ಯ ಎಂಬ ಮಗನಿದ್ದಾನೆ. 

ನತಾಶಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ 'ಪಾಂಡ್ಯ' ಉಪನಾಮವನ್ನು ತೆಗೆದುಹಾಕಿದ ನಂತರ ಡಿವೋರ್ಸ್ ವದಂತಿಗಳು‌ ಶುರುವಾದವು.

ಐಪಿಎಲ್ 2024 ಪಂದ್ಯಗಳಲ್ಲಿ ನತಾಶಾ ಅವರ ಅನುಪಸ್ಥಿತಿ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು.   

ಇದೀಗ ಇವರ ಸಂಬಂಧದಲ್ಲಿ ಮೂಡಿದ ಬಿರುಕಿಗೆ ಈ ನಟನ ಕಾರಣವೇ ಎಂಬ ಅನುಮಾನ ನೆಟ್ಟಗರಲ್ಲಿ ಮೂಡಿದೆ.

ಹಾರ್ದಿಕ್‌ ಪಾಂಡ್ಯ ಜೊತೆ ವಿಚ್ಛೇದನ ವದಂತಿ ಬೆನ್ನಲ್ಲೇ ನತಾಶಾ ಅವರು ದಿಶಾ ಪಟಾನಿ ವದಂತಿಯ ಗೆಳೆಯ ನಟ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 

ನತಾಶಾ ಮತ್ತು ಹಾರ್ದಿಕ್‌ ಪಾಂಡ್ಯ ವಿಚ್ಛೇದನಕ್ಕೆ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಅವರೇ ಕಾರಣ ಎಂದು ಟ್ರೋಲ್‌ ಮಾಡಲಾಗುತ್ತಿದೆ.

ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಜೊತೆಗಿನ ಸಂಬಂಧದಿಂದಲೇ ನತಾಶಾ ಮತ್ತು ಹಾರ್ದಿಕ್‌ ಪಾಂಡ್ಯ ದೂರವಾಗಿರಬಹುದು ಎಂಬ ಗುಮಾನಿ ಮೂಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link