Hardik Pandya: ನಾಯಕತ್ವದ ಬೆನ್ನು ಬಿದ್ದವನ ಬೆನ್ನು ಮೂಳೆಯನ್ನೇ ಮುರಿದುಬಿಟ್ಟರು..!
ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ವಿದಾಯ ಹೇಳಿದ ದುಖದಲ್ಲಿ ಎಲ್ಲರೂ ಇರಬೇಕಾದರೆ. ಬಹುಶಃ ಖುಷಿ ಪಟ್ಟವರು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಯಾಕೆಂದರೆ ಅವರಿಗೆ ರೋಹಿತ್ ಅವರು ವಿದಾಯ ಹೇಳಿದರೆ, ನಂತರದ ನಾಯಕತ್ವ ಅವರಿಗೆ ಸಿಗುತ್ತದೆ ಎನ್ನುವ ಖುಷಿ ಇತ್ತು.
ನಾಯಕನಾಗುವ ಕನಸುಕಂಡಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ, ನೂತ್ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಹಾಗೂ ಮುಖ್ಯ ಆಯ್ಕೆಗಾರ ಅಜತ್ ಅಗರ್ಕರ್ ಜೋಡಿ ಶಾಕ್ ಕೊಟ್ಟಿತ್ತು. ಟೀಂ ಇಂಡಿಯಾದ ಟಿ20 ನಾಯಕಾನಾಗಿ ಸೂರ್ಯಕುಮಾರ್ ಅವರನ್ನು ನೇಮಿಸುವ ಮೂಲಕ ಹಾರ್ದಿಕ್ ಪಾಂಡ್ಯಾ ಅವರ ಕನಸಿಗೆ ಮಸಿ ಬಳಿದಿತ್ತು.
ನಾಯಕನಾಗುವ ಮಾತು ಇರಲಿ, ಆದರೆ ಹಾರ್ದಿಕ್ ಪಾಂಡ್ಯಾ ಅವರ ಬಳಿ ಇದ್ದ ಉಪನಾಯಕನ ಪಟ್ಟವನ್ನು ಕೂಡ ಅವರಿಂದ ಕಸಿದುಕೊಂಡು ಅವರನ್ನು ಕುಗ್ಗಿಸಿಬಿಟ್ಟಿತ್ತು. ಈ ಮೂಲಕ ಕಷ್ಟ ಪಟ್ಟು ಜೀರೋದಿಂದ ಹೀರೊ ಆಗಿದ್ದ ಹಾರ್ದಿಕ್ ಪಾಂಡ್ಯಾ ಅವರನ್ನು ಮತ್ತೆ ಜೀರೊಗೆ ತಂದು ಇಳಿಸಿಬಿಟ್ಟಿತು. ಇನ್ನು ಮುಂದೆ ಹಾರ್ದಿಕ್ ಪಾಂಡ್ಯ ಟಿಂ ಇಂಡಿಯಾದಲ್ಲಿ ಒಬ್ಬ ಸಾಮಾನ್ಯ ಆಟಗಾರ ಅಷ್ಟೆ.
ಹಾರ್ದಿಕ್ ಪಾಂಡ್ಯಾ ಒಬ್ಬ ಅದ್ಭುತ ಆಟಗಾರ, ಒಳ್ಳೆಯ ಆಲ್‌ರೌಂಡರ್ ಆದರೆ ಆಟದಲ್ಲಷ್ಟೆ ಬೇಷ್ ಎನಿಸಿಕೊಂಡರೆ ಸಾಲದು ಅಲ್ವಾ..? ಸಹ ಆಟಗಾರರೊಂದಿಗೆ ಒಳ್ಳೆಯ ಸ್ನೇಹವನ್ನು ಕೂಡ ಹೊಂಟಿರಬೇಕು..ಹಾಗೆ ನೋಡೊಖೆ ಹೋದರೆ ಹಾರ್ದಿಕ್ ಪಾಂಡ್ಯಾ ಅವರಿಗೆ ಸಹ ಆಟಗಾರರೊಂದಿಗೆ ಒಳ್ಳೆಯ ಬಾಂಧವ್ಯಾ ಇರಲೇ ಇಲ್ಲ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡ ತೊರೆದು ಗುಜರಾತ್ ಟೈಟನ್ಸ್ ನಾಯಕನಾಗಿ ಹೋಗಿದ್ದರು, ಅಲ್ಲಿಯೇ ಕೆಲಸ ಮಾಡಿಕಂಡು ಇದ್ದಿದ್ದರೆ ಸರಿಹೋಗುತ್ತಿತ್ತು. ಮುಂಬೈ ತಂಡದ ನಾಯಕತ್ವ ಬಯಸಿ ಪಾಂಡ್ಯ ರೋಹಿತ್‌ರನ್ನು ಪಕ್ಕಕ್ಕಿರಿಸಿ ಮುಂಬೈ ತಂಡದ ನಾಯಕತ್ವದ ಗದ್ದುಗೆಯನ್ನು ಏರಿ ಕೂತಿದ್ದರು, ಇದು ಮೊದಲ ಭಾರಿಗೆ ಪಾಂಡ್ಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಡಿತ್ತು.
ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯನನ್ನು ನಾಯಕನನ್ನಾಗಿ ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡವರು ಬಹುಶಃ ಇಬ್ಬರೇ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಕಾರಣ, ಪಾಂಡ್ಯ ಪಟ್ಟಾಭಿಷೇಕ ಅವರದ್ದೇ ನಿರ್ಧಾರವಾಗಿತ್ತು. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಸ್ವಲ್ಪ ಕೂಡ ಇಷ್ಟ ಇರಲಿಲ್ಲ.
ಹಾರ್ದಿಕ್ ಪಾಂಡ್ಯ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕತ್ವ ಕಳೆದುಕೊಂಡಿದ್ದ ಹಿಟ್‌ಮ್ಯಾನ್ ಟೀಂ ಇಂಡಿಯಾದ ಟಿ20 ತಂಡದ ನಾಯಕನಾಗಿ ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ಟರು.