Free Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ
ಕಡಿಮೆ ಆದಾಯ ಹೊಂದಿರುವವರಿಗೆ ದೊಡ್ಡ ಉಡುಗೊರೆ ನೀಡಲು ಸರ್ಕಾರ ಸಿದ್ದವಾಗಿದೆ. ಕಡಿಮೆ ಆದಾಯ ಹೊಂದಿರುವವರಿಗಾಗಿ ಮನೆ ನಿರ್ಮಿಸಿಕೊಳ್ಳಲು 100 ಚದರ ಗಜ ಜಾಗ ನೀಡಲು ಸರ್ಕಾರ ಮುಂದಾಗಿದೆ.
ಈ ಯೋಜನೆಗೆ ಬೇಕಾದ ಕರಡನ್ನು ಕೂಡಾ ರಾಜ್ಯ ಸರ್ಕಾರ ಸಿದ್ದಪಡಿಸಿದೆ. ಮುಖ್ಯಮಂತ್ರಿ ಗ್ರಾಮೀಣ ಆವಾಸ್ ಯೋಜನೆ’ಯಡಿ ಈ ಭೂಮಿಯನ್ನು ನೀಡಲಾಗುವುದು.
ಭೂಮಿ ಇಲ್ಲದ ಅರ್ಹ ಅರ್ಜಿದಾರರಿಗೆ ಹಳ್ಳಿಗಳಲ್ಲಿ 100 ಚದರ ಗಜಗಳ ನಿವೇಶನವನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ರಾಜ್ಯದಲ್ಲಿ ಐದು ಲಕ್ಷ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಫಲಾನುಭವಿಗಳಿಗೆ ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಆರ್ಥಿಕ ಸಹಾಯವನ್ನು ಸಹ ನೀಡಲಾಗುತ್ತದೆ.
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದ ಕಡಿಮೆ ಆದಾಯದ ಕುಟುಂಬಗಳಿಗೆ ನಿವೇಶನ ನೀಡುವುದು ಮುಖ್ಯಮಂತ್ರಿ ಗ್ರಾಮೀಣ ವಸತಿ ಯೋಜನೆಯ ಉದ್ದೇಶವಾಗಿದೆ ಎಂದು ಇಲಾಖೆಯ ಮಹಾನಿರ್ದೇಶಕ ಜೆ ಗಣೇಶನ್ ತಿಳಿಸಿದ್ದಾರೆ.
100 ಚದರ ಗಜ ನಿವೇಶನಗಳನ್ನು ಮಂಜೂರು ಮಾಡುವ ಪ್ರದೇಶಗಳಲ್ಲಿ ಸುಸಜ್ಜಿತ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು, ಉದ್ಯಾನವನಗಳು ಮತ್ತು ತೆರೆದ ಹಸಿರು ಸ್ಥಳಗಳಂತಹ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸರ್ಜ್ಕಾರ ಈಗಾಗಲೇ ಸೂಚಿಸಿದೆ.
ಅಂದ ಹಾಗೆ ಈ ಯೋಜನೆಯನ್ನು ಹರಿಯಾಣ ಸರ್ಕಾರ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಎರಡು ಲಕ್ಷ ಅರ್ಹ ಫಲಾನುಭವಿಗಳಿಗೆ 100 ಚದರ ಗಜ ಭೂಮಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಮೂಲಕ ಹರ್ಯಾಣದ ಎರಡು ಲಕ್ಷ ಜನರ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ.