Shani Mangala Yuti: ಶನಿ ಮಂಗಳ ಯುತಿಯಿಂದ ಹಾನಿಕಾರಕ ಸಂಸಪ್ತಕ ಯೋಗ
ಶನಿ ಮಂಗಳ ಯುತಿ: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮುಂದಿನ ತಿಂಗಳು ನ್ಯಾಯದ ದೇವರು ಶನಿ ಮತ್ತು ಗ್ರಹಗಳ ಕಮಾಂಡರ್ ಮಂಗಳ ಗ್ರಹಗಳು ಒಟ್ಟಿಗೆ ಸೇರಲಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಕ್ರಮಣ ಮತ್ತು ಯುತಿಯಿಂದಾಗಿ ಕೆಲವು ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅದೇ ರೀತಿ ಶನಿ ಮಂಗಳ ಯುತಿಯಿಂದ ಹಾನಿಕಾರ ಸಂಸಪ್ತಕ ಯೋಗ ನಿರ್ಮಾಣವಾಗಲಿದೆ. ಕೆಲವು ರಾಶಿಯವರು ಇದರ ಹಾನಿಕಾರಕ ಪ್ರಭಾವವನ್ನು ಎದುರಿಸಬೇಕಾಗುತ್ತದೆ.
ಜುಲೈ 1, 2023ರಂದು ಮಂಗಳ ರಾಶಿ ಬದಲಾವಣೆ ಆಗಲಿದೆ. ಇದರಿಂದಾಗಿ ಸಂಶಪ್ತಕ ಯೋಗ ರೂಪುಗೊಳ್ಳಲಿದೆ. ಸಾಮಾನ್ಯವಾಗಿ ಈ ಯೋಗವನ್ನು ಶುಭ ಯೋಗ ಎಂತಲೇ ಕರೆಯಲಾಗುತ್ತದೆ. ಆದರೆ, ಈ ಸಮಯದಲ್ಲಿ ಮಂಗಳನು ಶನಿಯೊಟ್ಟಿಗೆ ಸೇರಿ ಈ ಯೋಗ ನಿರ್ಮಾಣವಾಗುತ್ತಿರುವುದರಿಂದ ಇದನ್ನು ಹಾನಿಕಾರಕ ಯೋಗ ಎಂದು ಹೇಳಲಾಗುತ್ತಿದೆ.
ಶನಿ-ಮಂಗಳ ಯುತಿಯಿಂದ ನಿರ್ಮಾಣವಾಗುತ್ತಿರುವ ಸಂಸಪ್ತಕ ಯೋಗವು ದೇಶ-ವಿದೇಶದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ, ಈ ದ್ವಾದಶ ರಾಶಿಯವರ ಮೇಲೆ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ ಎನ್ನಲಾಗುತ್ತಿದೆ.
ಸಂಸಪ್ತಕ ಯೋಗದ ದುಷ್ಪರಿಣಾಮಗಳಿಂದ ಬಚಾವ್ ಆಗಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. * ಹನುಮಂತನ ಪೂಜೆಯಿಂದ ಇದರ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಬಹುದು. * ಹೊರ ಹೋಗುವಾಗ ಕೆಂಪು ಚಂದನ ತಿಲಕವನ್ನು ಹಣೆಗೆ ಹಚ್ಚಿ. * ಗೋಧಿ ಮತ್ತು ಬೇಳೆಯನ್ನು ದಾನ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.