ಹರ್ಷಿಕಾ - ಭುವನ್ ಜೀವನದ ಮಧುರ ಕ್ಷಣವಿದು, ಇಲ್ಲಿವೆ ವೆಡ್ಡಿಂಗ್ ಫೋಟೋಸ್
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಚಂದನವನದ ತಾರೆಯರಾದ ಭುವನ್ ಮತ್ತು ಹರ್ಷಿಕಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ಕೊಡವ ಸಂಪ್ರದಾಯದಂತೆ ಹರ್ಷಿಕಾ ಭುವನ್ ವಿವಾಹ ನಡೆಯಿತು. ಕೊಡಗಿನ ವಿರಾಜಪೇಟೆಯ ಅಮ್ಮಾತಿ ಕೊಡವ ಸಮಾಜದಲ್ಲಿ ಭುವನ್ ಹರ್ಪಿಕಾ ಮದುವೆ ನಡೆಯಿತು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ಕೊಡವ ಶೈಲಿಯಲ್ಲಿ ಎರಡು ದಿನ ನಡೆದ ಅದ್ದೂರಿ ವಿವಾಹ ಜರುಗಿತು. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ ಮಾಡಲಾಯಿತು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ನಂತರ ಹುಡುಗ - ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನಡೆಯಿತು. ಎರಡನೇ ದಿನ ಬೆಳಗ್ಗೆ ಬಳೆ ಶಾಸ್ತ್ರ, ನಂತರ ಪೊಂಬಣ ಪೂಜೆ ಜರುಗಿತು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ಮದುಮಗ ಭುವನ್ ಮಂಟಪಕ್ಕೆ ಬಂದು, ಬಾಳೆ ಕಡೆದು ಬಂದರು. ಮದುಮಗ ಭುವನ್ ಅವರನ್ನು ಹುಡುಗಿ ಮನೆಯವರು ಕರೆದುಕೊಂಡು ಹೋದರು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ನಂತ್ರ ಬಂದ ಮದುಮಗ ಭುವನ್‌ಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸಿದರು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ನಂತ್ರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಕಾರ್ಯಕ್ರಮ ಶುರು ಮಾಡಿದರು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ
ನಂತ್ರ ಬಂದವರೆಲ್ಲ ಹುಡುಗ - ಹುಡುಗಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಟ್ಟು, ಊಟ ಮಾಡಿದರು. ಕೊನೆಯಲ್ಲಿ ಹುಡುಗ ಹುಡುಗಿ ಕೈ ಹಿಡಿದು ಎಬ್ಬಿಸಿದರು.
Photo Credit : ದೀಪಕ್ ವಿಜಯ್ ಫೋಟೋಗ್ರಫಿ