ಜೀವನ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ರಾ ಮೊಹಮ್ಮದ್ ಶಮಿ..? ʻ19ನೇ ಮಹಡಿಯʼ ಶಾಕಿಂಗ್ ಸತ್ಯ ಬಿಚ್ಚಿಟ್ಟ ವೇಗಿಯ ಗೆಳೆಯ..!
ಟೀಂ ಇಂಡಿಯಾ ಆಟಗಾರ ಶಮಿ ತನ್ನ ಪತ್ನಿ ಹಸೀನ್ ಜಹಾನ್‌ನಿಂದ ಬೇರ್ಪಟ್ಟ ಬಳಿಕ ಸಾಕಷ್ಟು ಆರೋಪಗಳನ್ನು ಹೊತ್ತುಕೊಳ್ಳಬೇಕಾಯಿತು.. ನಂತರ ಈ ಎಲ್ಲ ಸಮಸ್ಯೆಗಳಿಂದ ಹೊರಬಂದ ಮೇಲೂ ಶಮಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಅವರ ಸ್ನೇಹಿತ ಉಮೇಶ್ ಕುಮಾರ್ ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು...
ಈ ಬಗ್ಗೆ ಮಾತನಾಡಿದ ಶಮಿ ಗೆಲೇಯ.." ಶಮಿ ಆಗ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರು.. ನನ್ನ ಮನೆಯಲ್ಲಿ ನನ್ನೊಂದಿಗೆ ವಾಸಿಸುತ್ತಿದ್ದರು... ಆದರೆ ಪಾಕಿಸ್ತಾನದೊಂದಿಗೆ ಫಿಕ್ಸಿಂಗ್ ಆರೋಪ ಕೇಳಿಬಂದು.. ಆ ರಾತ್ರಿ ತನಿಖೆ ನಡೆದಾಗ ನಾನು ಎಲ್ಲವನ್ನೂ ಸಹಿಸಬಲ್ಲೆ, ಆದರೆ ನನ್ನ ದೇಶಕ್ಕೆ ದ್ರೋಹ ಬಗೆದ ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಶಮಿ ತನ್ನ ಜೀವನವನ್ನು ಕೊನೆಗೊಳಿಸಲು ಬಯಸಿದ್ದರು..
"ಆ ರಾತ್ರಿ ಅವರು ಆತ್ಮಹತ್ಯಗೆ ಯತ್ನಿಸಿದ್ದರು.. ಬೆಳಿಗ್ಗೆ 4 ಗಂಟೆ ಸುಮಾರಿಗೆ ನೀರು ಕುಡಿಯಲು ಎದ್ದೆ.. ನಾನು ಅಡುಗೆಮನೆಯ ಕಡೆಗೆ ಹೋಗುತ್ತಿದ್ದೆ, ಅವನು ಬಾಲ್ಕನಿಯಲ್ಲಿ ನಿಂತಿರುವುದನ್ನು ನೋಡಿದೆ. ಅಂದು ನಾವು 19 ನೇ ಮಹಡಿಯಲ್ಲಿ ವಾಸಿಸುತ್ತಿದ್ದೇವು.. ಆ ದಿನ ರಾತ್ರಿ ದೊಡ್ಡ ಅನಾಹುತ ತಪ್ಪಿತು.. ಅವರ ಮನಸ್ಸಲ್ಲಿ ಏನು ಓಡುತ್ತಿದೆ ಎಂದು ಅರಿತೆ.. ಅದು ಶಮಿ ಜೀವನದ ಸುದೀರ್ಘ ರಾತ್ರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿಕೊಂಡಿದ್ದರು.
ಇನ್ನು ವಿಶ್ವಕಪ್ ಇತಿಹಾಸದ ಬಗ್ಗೆ ಮಾತನಾಡುವುದಾದರೆ.. ಉತ್ತಮ ಪ್ರದರ್ಶನ ತೋರಿದ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ ಮುಂಚೂಣಿಯಲ್ಲಿದ್ದಾರೆ. ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಶಮಿ ಇಡೀ ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಶಮಿ ವಿಶ್ವಕಪ್‌ನಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ ಭಾರತೀಯ ಬೌಲರ್ ಆಗಿ ಇತಿಹಾಸ ನಿರ್ಮಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯಾದ ದೇಶಗಳ ಬೌಲರ್‌ಗಳ ಪಟ್ಟಿಯಲ್ಲಿ ಶಮಿ ಮೂರನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಪ್ರತಿ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಏಕೈಕ ಬೌಲರ್ ಶಮಿ. ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಕಳೆದ ಮೂರು ಐಸಿಸಿ ಟೂರ್ನಮೆಂಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ 11 ಆಟಗಾರರಲ್ಲಿ ಸ್ಥಾನ ಪಡೆಯುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು.