Email account ಹ್ಯಾಕ್ ಆಗಿದೆಯಾ ಎನ್ನುವುದನ್ನು ಈ ಸುಲಭ ವಿಧಾನಗಳಲ್ಲಿ ಪತ್ತೆ ಮಾಡಿ
)
ಇತ್ತೀಚಿನ ಕೆಲವು ವರದಿಗಳಲ್ಲಿ, ಸೋಶಿಯಲ್ ಮೀಡಿಯಾ ಸೈಟ್ ಫೇಸ್‌ಬುಕ್‌ನಿಂದ (Facebook) ಕೋಟ್ಯಂತರ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, ಭಾರತದ 60 ಲಕ್ಷಕ್ಕೂ ಹೆಚ್ಚು ಬಳಕೆದಾರರ ಡೇಟಾ ಸೋರಿಕೆಯಾಗಿದೆ.
)
ಪೇಮೆಂಟ್ ಅಪ್ಲಿಕೇಶನ್ Mobikwikನಿಂದಲೂ ಕೆಲವು ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಈ ಡಾಟಾ ಸೋರಿಕೆ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ತನಿಖೆಗೆ ಆದೇಶಿಸಿತ್ತು.
)
ನಿಮ್ಮ ಇಮೇಲ್ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿದೆ ಎಂಬ ಸಂದೇಹ ನಿಮಗಿದ್ದರೆ, ಅದಕ್ಕೂ ಈಗ ಪರಿಹಾರವಿದೆ. ಸುಲಭ ವಿಧಾನದಿಂದ ಇದನ್ನು ಪತ್ತೆ ಹಚ್ಚಬಹುದು. haveibeenpwned.com ಗೆ ಹೋಗಿ ನಿಮ್ಮ ಇ ಮೇಲ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಕಂಡುಕೊಳ್ಳಬಹುದು.
ನಿಮ್ಮ ಇಮೇಲ್ ಐಡಿಯನ್ನು haveibeenpwned.com ನಲ್ಲಿ ನಮೂದಿಸುವ ಮೂಲಕ ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಇಮೇಲ್ ಐಡಿಯನ್ನು ನಮೂದಿಸುವ ವೇಳೆ, ಸಿಗ್ಲಲ್ ನಲ್ಲಿ ಹಸಿರು ಬಣ್ಣ ಬಂದರೆ ನಿಮ್ಮ ಇಮೇಲ್ ಸುರಕ್ಷಿತವಾಗಿದೆ ಎಂದರ್ಥ. ಒಂದು ವೇಳೆ ಅದು ಕಂದು ಬಣ್ಣಕ್ಕೆ ತಿರುಗಿದರೆ , ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
ಸಿಸ್ಟಮ್‌ನಲ್ಲಿ ಹ್ಯಾಕಿಂಗ್ ಅಪಾಯವಿದ್ದರೆ, ತಕ್ಷಣ ನಿಮ್ಮ ಇಮೇಲ್ ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸಿ. ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ಇಡಿ. ಹೀಗೆ ಮಾಡುವುದರಿಂದ ಹ್ಯಾಕ್ ಆಗುವ ಅಪಾಯವನ್ನು ತಪ್ಪಿಸಿಕೊಳ್ಳಬಹುದು.