`ಹಾಸ್ಯ ಚಕ್ರವರ್ತಿ` ನರಸಿಂಹರಾಜು ಮೊಮ್ಮಗ ಕನ್ನಡದ ಈ ಧಾರಾವಾಹಿಯ ಹೀರೋ: ಯಾರದು ಗೊತ್ತಾ?

Fri, 21 Jun 2024-9:44 pm,

ಸದ್ಯ ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಇದೀಗ ಮತ್ತೋಂದು ಹೊಸ ಸೀರಿಯಲ್ ಪ್ರಸಾರವಾಗಲಿದೆ

ಅದುವೇ ‘ನನ್ನ ದೇವ್ರು’ ಎಂಬ ಸೀರಿಯಲ್. ಈ ಧಾರಾವಾಹಿ ಮೂಲಕ ಕಿರುತೆರೆಗೆ ಹೊಸ ಹೀರೋ ಆಗಮನವಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಪ್ರಸಾರವಾಗಲಿರುವ ಧಾರಾವಾಹಿಯೇ ನನ್ನ ದೇವ್ರು.

ಈ ಸೀರಿಯಲ್’ನಲ್ಲಿ ಹೀರೋ ಆಗಿ ಎಂಟ್ರಿ ಪಡೆಯುತ್ತಿರುವುದು ಅವಿನಾಶ್ ದಿವಾಕರ್. ಇವರು ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಅವರ ಮೊಮ್ಮಗ.

ಕನ್ನಡ ಚಿತ್ರರಂಗದಲ್ಲಿ ಸುಮಾರು 250 ಸಿನಿಮಾಗಳಲ್ಲಿ ನಟಿಸಿ, ಹಾಸ್ಯ ಪಾತ್ರದ ಮೂಲಕ ಜನಮನ ಸೆಳೆದಿದ್ದ ನರಸಿಂಹರಾಜು ಮೊಮ್ಮಗ ಇದೀಗ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಧಾರಾವಾಹಿಯ ಪ್ರೋಮೋ ಈಗಾಗಲೇ ಪ್ರಸಾರವಾಗಿದ್ದು, ನಟಿ ಮಯೂರಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link