ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗಿಲ್ಲದಿದ್ದರೆ ಈಗಲೇ ಈ ಕೆಲಸ ಮಾಡಿ, ಇಲ್ಲವೇ ಖಾಲಿಯಾಗುತ್ತೆ ಖಾತೆ!
ಪ್ರತಿ ಭಾರತೀಯ ನಾಗರೀಕರಿಗೂ ಆಧಾರ್ ಕಾರ್ಡ್ ತುಂಬಾ ಅಗತ್ಯ ದಾಖಲೆಯಾಗಿದೆ.
ಭದ್ರತೆಯ ದೃಷ್ಟಿಯಿಂದ ಆಧಾರ್ ಕಾರ್ಡ್ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಬಯೋಮೆಟ್ರಿಕ್ ಡೇಟಾವನ್ನು ಕೂಡ ಒಳಗೊಂಡಿರುತ್ತದೆ.
ಸುರಕ್ಷತೆಯ ದೃಷ್ಟಿಯಿಂದ ಆಧಾರ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಿದುವುದು ಅಗತ್ಯ.
ಒಂದೊಮ್ಮೆ ನಿಮ್ಮ ಆಧಾರ್ ತಪ್ಪಾದ ಕೈಗಳಿಗೆ ಸಿಕ್ಕರೆ ಅವರು ನಿಮ್ಮ ಗುರುತನ್ನು ಕದಿಯಬಹುದು. ಇದು ನಿಮ್ಮ ವೈಯಕ್ತಿಕ ಡೇಟಾ ಹಾನಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ನಿಮ್ಮ ಅಕೌಂಟ್ ಕೂಡ ಖಾಲಿಯಾಗಬಹುದು.
ನಿಮ್ಮ ವೈಯಕ್ತಿಕ ಡೇಟಾ ಕಳುವಾಗುವುದನ್ನು ತಪ್ಪಿಸಲು ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡುವುದು ಅವಶ್ಯಕವಾಗಿದೆ. ಇದರಿಂದ ನಿಮ್ಮ ಡೇಟಾ ಜೊತೆಗೆ ಖಾತೆಯೂ ಸುರಕ್ಷಿತವಾಗಿರುತ್ತದೆ.
ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡಲು ಮೊದಲು ಯುಐಡಿಎಐ ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ಬಯೋಮೆಟ್ರಿಕ್ಸ್ ಡೇಟಾ ಲಾಕ್ ಮಾಡಿ.
UIDAI ಹೊರತುಪಡಿಸಿ mAadhaar ಅಪ್ಲಿಕೇಷನ್ ನಲ್ಲಿ ಲಾಗ್ ಇನ್ ಆಗಿಯೂ ಸಹ ನಿಮ್ಮ ಬಯೋಮೆಟ್ರಿಕ್ಸ್ ಡೇಟಾವನ್ನು ಲಾಕ್ ಮಾಡಬಹುದು.
UIDAI ವೆಬ್ಸೈಟ್/ ಮೊಬೈಲ್ ಆಪ್ ನಲ್ಲಿ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ನಂತರ ನಿಗದಿತ ಜಾಗದಲ್ಲಿ ಓಟಿಪಿ ಭರ್ತಿ ಮಾಡಿ ಖಾತೆಗೆ ಲಾಗ್ ಇನ್ ಆಗಿ. ನಂತರ ಮುಂದಿನ ಪುಟದಲ್ಲಿ ಆಧಾರ್ ವಿಭಾಗದಲ್ಲಿ ಕಾಣುವ ಲಾಕ್/ ಅನ್ ಲಾಕ್ ಬಯೋಮೆಟ್ರಿಕ್ಸ್ ಆಯ್ಕೆಯನ್ನು ಆರಿಸಿ.
ನಿಮ್ಮ ಆಧಾರ್ ಸಂಖ್ಯೆಯನ್ನು ಆರಿಸಿ ಓಟಿಪಿ ನಮೂದಿಸಿ. ಬಳಿಕ ನೀವು ಲಾಕ್ ಬಯೋಮೆಟ್ರಿಕ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.
ಮೇಲೆ ಉಲ್ಲೇಖಿಸಿದ ಹಂತಗಳನ್ನೇ ಅನುಸರಿಸಿ ಕೊನೆಯಲ್ಲಿ ಅನ್ ಲಾಕ್ ಬಯೋಮೆಟ್ರಿಕ್ಸ್ ಆಯ್ಕೆಯನ್ನು ಆರಿಸಿದರೆ ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ ಲಾಕ್ ಆಗುತ್ತದೆ.