ಅಣ್ಣಾವ್ರು ಸಿನಿ ಜಗತ್ತಿಗೆ ಬರುವ ಮುನ್ನ ಇಂಗ್ಲಿಷ್ನಲ್ಲಿ ಬರೆದ ಪತ್ರ ನೋಡಿದ್ದೀರಾ?...ಪತ್ರದ ಹಿಂದಿದೆ ರೋಚಕ ಸ್ಟೋರಿ..!
1953 ರಲ್ಲಿ ಕರ್ನಾಟಕ ಫಿಲಂಸ್ ಜೊತೆಗೆ ಡಾ. ರಾಜಕುಮಾರ್ ಅವರು ಒಪ್ಪಂದ ಮಾಡಿಕೊಳ್ಳುವ ಮೂಲಕ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು.
ಗದುಗಿನ ಶಿವಪ್ಪ ಕುಬಸದ ಅವರು 1954 ರಲ್ಲಿ ಡಾ ರಾಜಕುಮಾರ್ ಅವರಿಗೆ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸಹಾಯ ಮಾಡಿದರು.
ಅಣ್ಣಾವ್ರು ಈ ಹಿಂದೆ ರಂಗಭೂಮಿಯಲ್ಲಿ ಸಕ್ರಿಯ ನಟರಾಗಿದ್ದರು, ಸಿನಿ ಜಗತ್ತಿಗೆ ಬರುವ ಮುನ್ನ ಅವರು ಗುಬ್ಬಿ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಈಗ ನಾವು ಹೇಳುತ್ತಿರುವ ವಿಷಯ ಏನಪ್ಪಾ ಅಂದರೆ ಅವರು ಸಿನಿ ಜಗತ್ತಿಗೆ ಬರುವ ಮುನ್ನ ಇಂಗ್ಲಿಶ್ ನಡೆಸಿದ ಪತ್ರ ವ್ಯವಹಾರಗಳು ಹಾಗೂ ದಾಖಲೆಗಳ ಮೂಲಕ ರೋಚಕ ಕಥೆಯನ್ನು ನಿಮ್ಮ ಮುಂದೆ ಇಡಲಿದ್ದೇವೆ.
ಕನ್ನಡದ ಕಂಠೀರವ ಡಾ.ರಾಜಕುಮಾರ್ ಅವರು ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪ್ರವೇಶಿಸಿರುವ ಎಲ್ಲರಿಗೂ ತಿಳಿದಿರುವ ಸಂಗತಿ.