ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮಗನನ್ನು ನೋಡಿದ್ದೀರಾ? ಇವರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್... ಕ್ಯಾಪ್ಟನ್ ಕೂಡ ಆಗಿದ್ರು; ಯಾರೆಂದು ಗೆಸ್ ಮಾಡಿ ನೋಡೋಣ
ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟ್ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದ ಸುನಿಲ್, ವಿಶ್ವಕಪ್ ತಂಡದ ಸದಸ್ಯರೂ ಆಗಿದ್ದರು
ಇನ್ನು ಇವರ ಮಗ ಕೂಡ ಟೀಂ ಇಂಡಿಯಾ ಪರ ಆಡಿದ್ದಾರೆ. ಅವರು ಯಾರು ಎಂಬುದು ಕೆಲವರಿಗಷ್ಟೇ ತಿಳಿದಿದೆ.
ರೋಹನ್ ಗವಾಸ್ಕರ್... ಮೈದಾನಕ್ಕಿಳಿದ ಕೆಲ ವರ್ಷಗಳಲ್ಲೇ ದೂರ ಸರಿದಿದ್ದರು. ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿಯೇಟ್ ಸ್ಕೂಲ್, ಬಾಂಬೆ ಸ್ಕಾಟಿಷ್ ಸ್ಕೂಲ್ ಮತ್ತು ರಾಮ್ನಿರಂಜನ್ ಆನಂದಿಲಾಲ್ ಪೋದರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ʼನಲ್ಲಿ ಶಿಕ್ಷಣ ಪಡೆದಿದ್ದಾರೆ.
ರೋಹನ್ ಗವಾಸ್ಕರ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. ಇನ್ನು ಸಾಂದರ್ಭಿಕವಾಗಿ ನಿಧಾನ-ಎಡಗೈ ಬೌಲಿಂಗ್ ಮಾಡುತ್ತಿದ್ದರು.
2003 ರಲ್ಲಿ, ರೋಹನ್ ಗವಾಸ್ಕರ್ ಅವರು ತಮ್ಮ ಬಾಲ್ಯದ ಪ್ರಿಯತಮೆ ಸ್ವಾತಿ ಮಾನ್ಕರ್ ಅವರನ್ನು ವಿವಾಹವಾದರು.
ಇನ್ನು ತಂದೆಯಂತೇ ಕ್ರಿಕೆಟ್ ಕಡೆ ಒಲವು ತೋರಿದ್ದ ರೋಹನ್ ಗವಾಸ್ಕರ್, ಹೆಚ್ಚು ಪ್ರಭಾವ ತೋರಲು ಸಾಧ್ಯವಾಗಿರಲಿಲ್ಲ.
ರೋಹನ್ ಗವಾಸ್ಕರ್ ಅವರು ಜನವರಿ 2004 ರಲ್ಲಿ ತಮ್ಮ ಅಂತರಾಷ್ಟ್ರೀಯ ODI ಚೊಚ್ಚಲ ಪಂದ್ಯವನ್ನು ಆಡಿದರು. 117 ಪಂದ್ಯಗಳಲ್ಲಿ 6,938 ರನ್ ಗಳಿಸಿದ್ದಾರೆ. 44.19 ರ ಬ್ಯಾಟಿಂಗ್ ಸರಾಸರಿಯಲ್ಲಿ ರೋಹನ್ ಗವಾಸ್ಕರ್ 18 ಶತಕ ಮತ್ತು 34 ಅರ್ಧಶತಕ ಬಾರಿಸಿದ್ದಾರೆ. ಅವರ ಅತ್ಯುನ್ನತ ಸ್ಕೋರ್ ಅಜೇಯ 212.
2001-2002 ರಲ್ಲಿ ಬಂಗಾಳ ರಣಜಿ ತಂಡದ ನಾಯಕರಾಗಿದ್ದಾಗ, ಅವರು ಸತತ ಎರಡು ವರ್ಷಗಳಲ್ಲಿ ತಂಡವನ್ನು ಫೈನಲ್ʼಗೆ ಕರೆದೊಯ್ದರು. ಆದರೆ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಇನ್ನು 2012ರಲ್ಲಿ ರೋಹನ್ ಗವಾಸ್ಕರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.