ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..!
ಇದಲ್ಲದೆ, ಕೆಲ ನಾಯಕಿಯರು ಕ್ರಿಕೆಟಿಗರೊಂದಿಗೆ ಸಂಬಂಧ ಹೊಂದಿರುವ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿತ್ತು. ಅದರಲ್ಲಿ ಒಂದು ಜೋಡಿ ನಟಿ ನಗ್ಮಾ ಮತ್ತು ಸೌರವ್ ಗಂಗೂಲಿ.
ಇವರಿಬ್ಬರು ಒಂದೊಮ್ಮೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಸೌರವ್ ಗಂಗೂಲಿಗೆ ಮದುವೆಯಾಗಿತ್ತು. ಅಂದಹಾಗೆ ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಜೊತೆಗಿನ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ನಗ್ಮಾ ಮಾತನಾಡಿದ್ದರು.
ನಗ್ಮಾ ಅವರ ನಿಜವಾದ ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಅಮ್ಮನ ಒತ್ತಾಯದ ಮೇರೆಗೆ ನಟನೆಯ ಜಗತ್ತಿಗೆ ಬಂದವರು.1990 ರಲ್ಲಿ ಸಲ್ಮಾನ್ ಖಾನ್ ಅವರ 'ಬಾಘಿ: ಎ ರೆಬೆಲ್ ಫಾರ್ ಲವ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಈ ಚಿತ್ರವು ಆ ವರ್ಷದ ಏಳನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.
ಇನ್ನು 1999 ಕ್ರಿಕೆಟ್ ವಿಶ್ವಕಪ್’ನಲ್ಲಿ ನಗ್ಮಾ ಮತ್ತು ಸೌರವ್ ಗಂಗೂಲಿ ಭೇಟಿಯಾದರು. ಈ ಸಂಬಂಧ ಆಗಿನಿಂದಲೇ ಶುರುವಾಯಿತು. ನಗ್ಮಾ ಮತ್ತು ಸೌರವ್ ಗಂಗೂಲಿ ಜೊತೆಯಾಗಿ ಸಾಕಷ್ಟು ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಆದರೆ ಈ ವಿಚಾರ ಗಂಗೂಲಿ ಮನೆಯಲ್ಲಿ ತಿಳಿಯಿತು.
ವರದಿಗಳ ಪ್ರಕಾರ, ಒಮ್ಮೆ ನಗ್ಮಾ ಮತ್ತು ಸೌರವ್ ಗಂಗೂಲಿ ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ, ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ನಗ್ಮಾ ಮತ್ತು ಸೌರವ್ ಗಂಗೂಲಿ ನಡುವೆ ಏನೋ ನಡೆಯುತ್ತಿದೆ ಎಂಬ ಮಾತುಗಳು ಏರತೊಡಗಿದವು. ಅಷ್ಟೇ ಅಲ್ಲದೆ, ಇವರಿಬ್ಬರ ಸಂಬಂಧದ ಸುದ್ದಿ ಸೌರವ್ ಗಂಗೂಲಿ ಪತ್ನಿ ಡೋನಾ ಅವರ ಕಿವಿಗೆ ಬಿದ್ದಿತ್ತು.
ಇದಾದ ಬಳಿಕ, ಸೌರವ್ ಗಂಗೂಲಿ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಅಷ್ಟೇ ಅಲ್ಲದೆ, ಡೋನಾ ಡಿವೋರ್ಸ್ ಕೂಡ ಕೇಳಿದ್ದರಂತೆ. ಇದನ್ನು ನಿರಾಕರಿಸಿದ ಗಂಗೂಲಿ ಎಲ್ಲರೆದುರು ಸ್ಪಷ್ಟನೆಯನ್ನೂ ನೀಡಿದ್ದರು.