ವ್ಯಾಯಾಮ, ವರ್ಕ್‌ಔಟ್‌ ಏನೂ ಬೇಡ..ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ!

Sat, 28 Sep 2024-8:24 am,

BUTTERMILK BENEFITS: ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ತಡೆಯಲು ಇದು ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ಅನೇಕರು ಪ್ರತಿದಿನ ಒಂದು ಲೋಟ ಮಜ್ಜಿಗೆಯನ್ನು ಕುಡಿಯುತ್ತಾರೆ. ಮನೆಯಲ್ಲಿ ಮಾಡಿದ ಮಜ್ಜಿಗೆ ಕುಡಿಯುವುದಕ್ಕಿಂತ ಉತ್ತಮವಾದುದೇನೂ ಇಲ್ಲ.  

ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಹೆಚ್ಚಾದಂತೆ, ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಹೃದಯಾಘಾತದಂತಹ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ನೀವು ನಿಯಮಿತವಾಗಿ ಮಜ್ಜಿಗೆ ಕುಡಿಯಬೇಕು. ನೀವು ಕುಡಿಯುವ ಮಜ್ಜಿಗೆಗೆ ಕೆಲವು ಮೆಂತ್ಯ ಕಾಳುಗಳು, ಅಗಸೆಬೀಜಗಳು ಮತ್ತು ಜೀರಿಗೆ ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. 

ಮೊಸರಿಗೆ ನೀರನ್ನು ಬೆರಸಿ ಚೆನ್ನಾಗಿ ಮಿಕ್ಸ್‌ ಮಾಡಿ, ನಂತರ ಮೆಂತ್ಯ ಕಾಳುಗಳು, ಅಗಸೆಬೀಜಗಳು ಮತ್ತು ಜೀರಿಗೆಯನ್ನು ಬೆರೆಸಿ ಪುಡಿ ಮಾಡಿ ಮಜ್ಜಿಗೆಗೆ ಬರೆಸಿ ಚೆನ್ನಾಗಿ ಮಿಶ್ರಣ ಮಾಡಿ. 

ಒಂದು ಲೋಟದಲ್ಲಿ ಮಜ್ಜಿಗೆಯನ್ನು ತೆಗೆದುಕೊಂಡು ಒಂದು ಚಮಚ ಅಗಸೆಬೀಜ, ಜೀರಿಗೆ ಮತ್ತು ಮೆಂತ್ಯ ಪುಡಿಯನ್ನು ಸೇರಿಸಿ. ಪ್ರತಿದಿನ ಊಟದ ನಂತರ ಇದನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಸುಲಭವಾಗಿ ಕರಗುತ್ತದೆ. 

ಕೊಲೆಸ್ಟ್ರಾಲ್ ಕಡಿಮೆಯಾಗದಿದ್ದರೆ ಅದು ಮೊದಲು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಎಂದರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

ಇನ್ನೊಂದೆಡೆ ಕೊಲೆಸ್ಟ್ರಾಲ್ ದೇಹದಲ್ಲಿನ ಬೊಜ್ಜನ್ನು ಹೆಚ್ಚಿಸುತ್ತದೆ. ಈ ಬೊಜ್ಜನ ಕಾರಣ ಮಧುಮೇಹ ದೇಹವನ್ನು ಆವರಿಸುತ್ತದೆ. ಅದರಿಂದಾಗಿ ಎಲ್ಲದಕ್ಕೂ ಮೂಲವಾದ ಕೊಲೆಸ್ಟ್ರಾಲ್ ಅನ್ನು ಎಂದಿಗೂ ನಿರ್ಲಕ್ಷಿಸಬಾರದು.

ನಿತ್ಯವೂ ಮಜ್ಜಿಗೆ ತಯಾರಿಸಿ ಪ್ರತಿದಿನ ಕುಡಿಯುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.   

Disclaimer – ಇಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿವೆ. ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿದ ನಂತರವೇ ಅದನ್ನು ಅಳವಡಿಸಿಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link