ರಾತ್ರಿ ವೇಳೆ ಕೇವಲ ಇದನ್ನು ಸೇವಿಸಿ ಸಾಕು.. ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತದೆ..!
how to burn belly fat: ಕೆಲವೊಬ್ಬರಿಗೆ ಅದೆಷ್ಟೇ ಡಯಟ್ ಪಾಲಿಸಿದರು, ಅದೆಷ್ಟೇ ವ್ಯಾಯಾಮ ಮಾಡಿದರೂ ಕೂಡ ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ಆದರೆ, ಈ ಆಹರವನ್ನು ರಾತ್ರಿಯ ವೇಳೇ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು.
ಗೋಧಿ ಹಿಟ್ಟಿನಿಂದ ಚಪಾತಿ ಅಥವಾ ರೊಟ್ಟಿ ಮಾಡಿ ಸೇವಿಸುವುದರಿಂದ ಕಡಿಮೆ ಕ್ಯಾಲೊರಿಗಳು ನಿಮ್ಮ ಹೊಟ್ಟೆ ಸೇರುತ್ತವೆ, ಇದು ನಿಮ್ಮ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಉತ್ಕರ್ಷಣಾ ನಿರೋಧಕಗಳಿಂದ ಸಮೃದ್ಧವಾಗಿದೆ, ಇದನ್ನು ಬಳಸಿ ಸೂಪ್ ಮಾಡಿ ಕುಡಿಯುವುದರಿಂದ ನಿಮ್ಮ ಬೊಜ್ಜು ಕರಗುತ್ತದೆ.
ಸಾಲ್ಮನ್ ಫಿಶ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಷ್ಟೆ ಅಲ್ಲ ಇದು ಬೊಜ್ಜು ಕರಗಿಸಲು ಕೂಡ ಸಾಕಷ್ಟು ಸಹಾಯ ಮಾಡುತ್ತದೆ.
ರಾತ್ರಿಯ ವೇಳೆ ಹಲವರು ಹೆಚ್ಚು ಆಹಾರ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಹೀಗೆ ಮಾಡುವುದು ತುಂಬಾ ತಪ್ಪು, ರಾತ್ರಿಯ ವೇಳೆ ಆಹಾರದ ಬದಲಿಗೆ ಹಣ್ಣುಗಳನ್ನು ಸೇವಿಸಿ, ಇದರಿಂದ ನಿಮ್ಮ ಬೊಜ್ಜು ಕರಗುತ್ತದೆ.
ಬ್ರೊಕೋಲಿ, ಲೆಟಿಸ್ ಹಾಗೂ ಪಾಲಕ್‌ನಂತಹ ಪದಾರ್ಥಗಳನ್ನು ಬಳಸಿ ಸಲಾಡ್ ತಯಾರಿಸಿ ಸೇವಿಸುವುದರಿಂದ ನಿಮ್ಮ ತೂಕವನ್ನು ಇಳಿಸಬಹುದು, ಅಷ್ಟೆ ಅಲ್ಲದೆ ನಿಮ್ಮ ಬೊಜ್ಜನ್ನು ಕೂಡ ಕಡಿಮೆ ಮಾಡಬಹುದು.